ಬೆಂಗಳೂರು : ಮದುವೆ ಹಾಗೂ ಶುಭ ಸಮಾರಂಭಗಳಿಗೆ ಮೆರಗು ನೀಡುವ ನಿಟ್ಟಿನಲ್ಲಿ, ಗೋಲ್ಡನ್ ಕ್ರೀಪರ್ ಸಂಸ್ಥೆಯು ನಗರದಲ್ಲಿ ವಿನೂತನ ಆಭರಣ ಪ್ರರ‍್ಶನ ಮತ್ತು ಮಾರಾಟ ಮೇಳವಾದ ' ಆಭರಣಗಳ ಪ್ರರ‍್ಶನಕ್ಕೆ ಚಾಲನೆ ನೀಡಿದೆ.ನಗರದ ಶೆರಟನ್ ಗ್ರಾಂಡ್ ಹೋಟೆಲ್ ನಲ್ಲಿ ಆಯೋಜಿಸಿರುವ ಈ ಮೇಳಕ್ಕೆ ಜನಪ್ರಿಯ ನಟಿ ಅಮೃತ ಪ್ರೇಮ್ ಶುಕ್ರವಾರ ಚಾಲನೆ ನೀಡಿದರು. ಆನಂತರ ಮಾತನಾಡಿದ ಅವರು, "ಚಿನ್ನದ ಬೆಲೆ ಏರಿಕೆಯಾಗುತ್ತಿರುವುದರಿಂದ ಇಂದೇ ಚಿನ್ನ ಖರೀದಿಸಿಟ್ಟುಕೊಳ್ಳುವುದು ಸೂಕ್ತವಾಗಿದೆ.
ಚಿನ್ನ ಮೇಲೆ ಹೂಡಿಕೆ ಮಾಡುವುದು ಬಹಳ ಭದ್ರತೆ ದೃಷ್ಟಿಯಿಂದ ಒಳ್ಳೆಯದು. ಹೀಗಾಗಿ ಆಭರಣ ಮಳಿಗೆಗೆ ಭೇಟಿ ನೀಡಿ ಅರ‍್ಷಕವಾದ ಆಭರಣಗಳನ್ನು ಖರೀದಿಸಿ" ಎಂದರು. *ಮೇಳದ ಪ್ರಮುಖ ಆರ‍್ಷಣೆಗಳು:*50ಕ್ಕೂ ಹೆಚ್ಚಿನ ಮಳಿಗೆಗಳಿವೆ. ದೇಶದ ವಿವಿಧ ಮೂಲೆಗಳಿಂದ ಆಗಮಿಸಿರುವ 50ಕ್ಕೂ ಹೆಚ್ಚು ಅಗ್ರ ಶ್ರೇಣಿಯ ಆಭರಣ ತಯಾರಕರು ಮತ್ತು ಮಳಿಗೆಗಳು ಒಂದೇ ವೇದಿಕೆಯಲ್ಲಿ ಭಾಗವಹಿಸಿದ್ದಾರೆ.ಪ್ರತಿ ಚಿನ್ನದ ಬಿಐಎಸ್ (ಃIS) ಹಾಲ್ ಮರ‍್ಕ್ ಮತ್ತು ವಜ್ರಾಭರಣಗಳು ಅಂತಾರಾಷ್ಟ್ರೀಯ ಗುಣಮಟ್ಟದ ಉIಂ/IಉI ಪ್ರಮಾಣಪತ್ರವನ್ನು ಹೊಂದಿರುವುದರಿಂದ ಗ್ರಾಹಕರು ನಿಶ್ಚಿಂತೆಯಿಂದ ಖರೀದಿಸಬಹುದಾಗಿದೆ. ವಿಶೇಷ ವಿನ್ಯಾಸಗಳು: ಬೆಂಗಳೂರು, ಮುಂಬೈ, ಕೋಲ್ಕತ್ತಾ, ಜೈಪುರ, ಹೈದರಾಬಾದ್, ಚೆನ್ನೈ ಸೇರಿದಂತೆ ದೇಶದ ವಿವಿಧ ಭಾಗಗಳ ಕುಶಲರ‍್ಮಿಗಳು ತಯಾರಿಸಿದ ವಿಭಿನ್ನ ಶೈಲಿಯ ಆಭರಣಗಳು ಇಲ್ಲಿ ಲಭ್ಯವಿದೆ. ವಿನಿಮಯ ಮತ್ತು ಸೇವೆ: ಗ್ರಾಹಕರು ತಮ್ಮ ಹಳೆಯ ಚಿನ್ನವನ್ನು ನೀಡಿ ಹೊಸ ಆಭರಣಗಳನ್ನು ಬದಲಾಯಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಅಲ್ಲದೆ, ಮೇಳದ ನಂತರವೂ ಗ್ರಾಹಕರಿಗೆ ಆಭರಣ ಸಂಬಂಧಿತ ಸೇವೆಗಳನ್ನು ಒದಗಿಸಲಾಗುವುದು ಎಂದು ಆಯೋಜಕರಾದ ಜಗದೀಶ ಬಿ.ಎನ್ ಮತ್ತು ಹೇಮಲತಾ ಜಗದೀಶ್ ತಿಳಿಸಿದ್ದಾರೆ.ಭಾಗವಹಿಸಿರುವ ಪ್ರಮುಖ ಮಳಿಗೆಗಳು: ಆನಂದ್ ಜ್ಯುವೆರ‍್ಸ್, ನವರತನ್ & ಸನ್ಸ್, ಸಿಂಹ ಜ್ಯುವೆರ‍್ಸ್, ಅಮ್ರಪಾಲ, ವರಶ್ರೀ, ರಾಜಿ ಜ್ಯೂವೆಲ್ಲರಿ, ಸಂಕೇಶ್ ಸುರಾನ, ಶ್ರೀ ಗಣೇಶ್ ಡೈಮೆಂಡ್ಸ್, ಅರಹಮ್ (ಕೋಲ್ಕತ್ತಾ), ಸ್ಯಾಂಜಾನಿ (ಮುಂಬೈ), ಬನೇಥಿ ಎಕ್ಸ್‌ಪರ‍್ಟ್ಸ್ (ಜೈಪುರ), ವೇಗಾ (ಹೈದರಾಬಾದ್) ಸೇರಿದಂತೆ ಅನೇಕ ಪ್ರಖ್ಯಾತ ಬ್ರ‍್ಯಾಂಡ್‌ಗಳು ತಮ್ಮ ಹೊಸ ವಿನ್ಯಾಸಗಳನ್ನು ಪ್ರರ‍್ಶಿಸಲಿವೆ.
ಮುಂಬರುವ ಹಬ್ಬಗಳು ಮತ್ತು ಮದುವೆ ಸೀಸನ್‌ಗೆ ಆಭರಣ ಖರೀದಿಸಲು ಬಯಸುವ ಬೆಂಗಳೂರಿನ ನಾಗರಿಕರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಸರ‍್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಗೋಲ್ಡನ್ ಕ್ರೀಪರ್ ಸಂಸ್ಥೆ ಕೋರಿದೆ. ಪ್ರರ‍್ಶನವು ಫೆ.೧ರಂದು ಅಂತ್ಯಗೊಳ್ಳಿದೆ.