ನೃತ್ಯ ದಿಶಾ ಟ್ರಸ್ಟಿನ ವಿದ್ಯಾರ್ಥಿಗಳಿಂದ ಆಕರ್ಷಣೀಯ ನೃತ್ಯ ಪ್ರದರ್ಶನ

varthajala
0

ಬೆಂಗಳೂರು : ನಗರದ ಹೆಸರಾಂತ ಭರತನಾಟ್ಯ ಸಂಸ್ಥೆಯಾದ ನೃತ್ಯ ದಿಶಾ ಟ್ರಸ್ಟಿನ ಗುರು ಡಾ|| ದರ್ಶಿನಿ ಮಂಜುನಾಥ್ ಅವರ ನಿರ್ದೇಶನದಲ್ಲಿ ನಯನ ಸಭಾಂಗಣದ ವೇದಿಕೆಯಲ್ಲಿ  2026ರ ಸಾಲಿನ "ನೃತ್ಯ ನೀರಾಜನ" ಕಿರಿಯರ ನೃತ್ಯ ಉತ್ಸವ-12 ಭಕ್ತಿ ಪಾದಾರ್ಪಣೆ ಕಾರ್ಯಕ್ರಮ ಜರುಗಿತು.

ಡಾ|| ದರ್ಶಿನಿ ಮಂಜುನಾಥ್ ರವರ ಶಿಷ್ಯೆಯರಾದ ಕು|| ಭೂಮಿಕಾ, ಕು|| ಹನ್ಸಿಕಾ, ಕು|| ಪ್ರಿಯದರ್ಶಿನಿ ಮತ್ತು ಕು|| ಶ್ರದ್ಧಾ ಭರತನಾಟ್ಯ ಕಾರ್ಯಕ್ರಮ ನೀಡಿ ಪ್ರಸಂಶೆಗೆ ಪಾತ್ರರಾದರು.

ಮೊದಲಿಗೆ ಮಿಶ್ರಛಾಪು ತಾಳದ ಅಮೃತವರ್ಷಿಣಿ ರಾಗದ "ಪುಷ್ಪಾಂಜಲಿ" ಇಂದ ಕಾರ್ಯಕ್ರಮ ಪ್ರಾರಂಭಗೊಳಿಸಿ, "ತಿಶ್ರ ಅಲರಿಪು"ದೊಂದಿಗೆ ಗಣೇಶ, ಸರಸ್ವತಿ ಹಾಗೂ ಶಿವನ  ಶ್ಲೋಕಗಳನ್ನು  ಪ್ರದರ್ಶಿಸಿದ್ದು ವಿಶೇಷ, ಮುಂದಿನ ಪ್ರಸ್ತುತಿ ಕಲ್ಯಾಣಿ ಜತಿಸ್ವರವಾಗಿತ್ತು. ಏಕವ್ಯಕ್ತಿ ಪ್ರದರ್ಶನದಲ್ಲಿ ಕು|| ಶ್ರದ್ಧಾ  "ಆದಿಗೋ ಬರುತಿಹನೆ", ಕು|| ಭೂಮಿಕಾ "ಕಂಡೆ ಕರುಣಾನಿಧಿಯಾ", ಕು||ಹನ್ಸಿಕಾ  ಅನ್ನಮಾಚಾರ್ಯರ ವಿರಚಿತ "ಡೋಲಾಯಂ", ಕು|| ಪ್ರಿಯ ದರ್ಶಿನಿ "ಚಾಮುಂಡೇಶ್ವರಿ" ಕೃತಿ ನರ್ತಿಸಿದರು. 

ನಂತರ ನಾಲ್ಕೂ ಕಲಾವಿದರು "ಅಳಗು ದೈವಮಗ ವಂದು" ಪ್ರಸಿದ್ಧ ತಮಿಳು ಕಾವಡಿ ನರ್ತಿಸಿದರು. ಕೊನೆಯಲ್ಲಿ "ಪರಸ್ ತಿಲ್ಲಾನ" ಹಾಗೂ "ಗರುಡ ಗಮನ" ಮಂಗಳದೊಂದಿಗೆ ಕಾರ್ಯಕ್ರಮ ಸಂಪೂರ್ಣಗೊಳಿಸಿ ನೆರೆದಿದ್ದ ನೂರಾರು ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾದರು. ಗುರು ಡಾ|| ದರ್ಶಿನಿ ಮಂಜುನಾಥ್ ರವರ ಎಲ್ಲಾ ನೃತ್ಯ ಸಂಯೋಜನೆಗೆ ಮೆಚ್ಚುಗೆ ವ್ಯಕ್ತವಾಯಿತು. ಒಟ್ಟಿನಲ್ಲಿ ನೃತ್ಯ ನೀರಾಜನ-12 ಯಶಸ್ವಿ ಪ್ರದರ್ಶನ ಕಂಡಿತು.

Post a Comment

0Comments

Post a Comment (0)