ಉತ್ತರ ಕರ್ನಾಟಕ ಭಾಗದಲ್ಲಿನ ಸವಳು-ಜವಳು ಭೂಮಿಯ ಅಭಿವೃದ್ಧಿಯ ಅನುದಾನ ಬಿಡುಗಡೆಗೆ ಕ್ರಮ- ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ

varthajala
0

  ಬೆಂಗಳೂರು  : ರಾಜ್ಯದಲ್ಲಿ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿತ ಕೇಂದ್ರದಲ್ಲಿರುವ ದತ್ತಾಂಶದನ್ವಯ ಸುಮಾರು 77646.6 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶವು ಸವಳು-ಜವಳು ಬಾದಿತವಾಗಿರುತ್ತದೆ. ಇದರಲ್ಲಿ ಉತ್ತರ ಕರ್ನಾಟಕದ ಒಟ್ಟು 13 ಜಿಲ್ಲೆಗಳಲ್ಲಿ ಸವಳು-ಜವಳು ಬಾಧಿತ ಪ್ರದೇಶ 56621.34 ಹೆಕ್ಟೇರ್‍ಗಳಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದರು. ಇಂದು ವಿಧಾನಸಭೆಯ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಕಾಘವಾಡ ಕ್ಷೇತ್ರದ ಭರಮಗೌಡ ಅಲಗೌಡ ಕಾಗೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಜಲಾನಯನ ಅಭಿವೃದ್ಧಿ ಇಲಾಖೆ ವತಿಯಿಂದ ಮಳೆಯಾಶ್ರಿತ ಪ್ರದೇಶದಲ್ಲಿ (ಅಚ್ಚುಕಟ್ಟು ಪ್ರದೇಶವನ್ನು ಹೊರತುಪಡಿಸಿ) ಕೇಂದ್ರ ಪುರಸ್ಕøತ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ-ಸಮಸ್ಯಾತ್ಮಕ ಮಣ್ಣುಗಳ ಸುಧಾರಣೆ ಕಾರ್ಯಕ್ರಮದಡಿ 2016-17ನೇ ಸಾಲಿನಿಂದ 2025-26ನೇ ಸಾಲಿನವರೆಗೆ ಒಟ್ಟು ರೂ. 31.43 ಕೋಟಿಗಳ ವೆಚ್ಚದಲ್ಲಿ ಸವಳು-ಜವಳು ಬಾಧಿತ ಪ್ರದೇಶಗಳಲ್ಲಿ ಬಸಿಕಾಲುವೆ ನಿರ್ಮಾಣ ಮೂಲಕ ಮಣ್ಣಿನ ಸುಧಾರಣೆಗೆ ಒಟ್ಟು 4208.19 ಹೆಕ್ಟೇರ್ ಪ್ರದೇಶದಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

 2024-25ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ಘೋಷಿಸಿದ್ದಂತೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಲಾನಯನ ಅಭಿವೃದ್ಧಿ ಇಲಾಖೆ ವತಿಯಿಂದ ಒಟ್ಟು 53.98 ಹೆಕ್ಟೇರ್ ಸವಳು-ಜವಳು ಪ್ರದೇಶವನ್ನು ರೂ.20.03 ಲಕ್ಷಗಳ ವೆಚ್ಚದೊಂದಿಗೆ ಉಪಚರಿಸಿದ್ದು, 5992 ಮಾನವ ದಿನಗಳನ್ನು ಸೃಜಿಸಲಾಗಿರುತ್ತದೆ ಎಂದರು. 2025-26ನೇ ಸಾಲಿನಲ್ಲಿ ಕೇಂದ್ರ ಪುರಸ್ಕøತ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ-ಸಮಸ್ಯಾತ್ಮಕ ಮಣ್ಣುಗಳ ಸುಧಾರಣೆ ಕಾರ್ಯಕ್ರಮಕ್ಕೆ ಈಗಾಗಲೇ ಕೇಂದ್ರ ಸಚಿವರನ್ನು ಸಹ ಭೇಟಿ ಮಾಡಿ ಅನುದಾನ ಕೋರಲಾಗಿದೆ. ರೂ. 4.18 ಕೋಟಿಗಳ ಹೆಚ್ಚುವರಿ ಅನುದಾನಕ್ಕೆ ಅನುಮೋದನೆ ದೊರೆತಿದೆ. ಅನುದಾನವನ್ನು ನಿರೀಕ್ಷಿಸಲಾಗಿದೆ ಎಂದು ವಿಧಾನಸಭೆಯಲ್ಲಿ ತಿಳಿಸಿದರು.

Post a Comment

0Comments

Post a Comment (0)