ಮೈಸೂರು ಮೃಗಾಲಯದ ಗಂಡು ಜಿರಾಫೆ "ಯುವರಾಜ" ನಿಧನ

varthajala
0

 ಬೆಂಗಳೂರು : ಮೈಸೂರು ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಸುಮಾರು 25 ವರ್ಷ ವಯಸ್ಸಿನ ಗಂಡು ಜಿರಾಫೆ "ಯುವರಾಜ" ವೃದ್ದಾಪ್ಯದ ಕಾರಣ ಜನವರಿ 28 ರಂದು ಬೆಳಿಗ್ಗೆ 10.30ರ ಸಮಯದಲ್ಲಿ ನಿಧನ ಹೊಂದಿರುತ್ತದೆ ಎಂಬ ವಿಷಯವನ್ನು ತಿಳಿಸಲು ಮೈಸೂರು ಮೃಗಾಲಯವು ವಿμÁಧಿಸಿದೆ.

 1987ರಲ್ಲಿ ಜರ್ಮನಿಯಿಂದ ತಂದ ಹೆನ್ರಿ ಮತ್ತು ಹನಿ ಜಿರಾಫೆಗಳಿಗೆ 9ನೇ ಮರಿಯಾಗಿ ದಿನಾಂಕ 7/12/2001ರಲ್ಲಿ ಜನಿಸಿದ ಯುವರಾಜ ಜಿರಾಫೆಯು ಜನಿಸಿದ ನಂತರ ಪ್ರಾಣಿಪಾಲಕರ ಕೈ ಆರೈಕೆಯಲ್ಲಿ ಬೆಳದ ಹಾಗೂ ಮೃಗಾಲಯದಲ್ಲಿ 25 ವರ್ಷಗಳ ಕಾಲ ಬದುಕಿದ ಜಿರಾಫೆಯಾಗಿದೆ. ಹನಿ ಮತ್ತು ಹೆನ್ರಿ ಜಿರಾಫೆಗಳಿಗೆ ಜನಿಸಿದ ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಮತ್ತು ಯುವರಾಜ ಜಿರಾಫೆಗಳಲ್ಲಿ ಈವರೆಗೆ ಬದುಕಿದ ಜಿರಾಫೆ ಯುವರಾಜ ಜಿರಾಫೆಯಾಗಿದ್ದು, ಜಿರಾಫೆಯ ಸಾವು ಮೃಗಾಲಯಕ್ಕೆ ತುಂಬಲಾರದ ನಷ್ಟವಾಗಿದ್ದು, ಮೈಸೂರು ಮೃಗಾಲಯವು ತೀವ್ರ ಸಂತಾಪವನ್ನು ಸೂಚಿಸಿದೆ.

Post a Comment

0Comments

Post a Comment (0)