ಶಿಡ್ಲಘಟ್ಟದ ರಾಜೀವ್ ಗೌಡನ ಮೇಲೆ ಪ್ರತ್ಯೇಕವಾಗಿ ಗುಂಡಾಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸಿ 'ದ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ' ನಿಂದ ರಾಜ್ಯಪಾಲರಿಗೆ ಮನವಿ

varthajala
0

  ಶಿವಮೊಗ್ಗ : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆಯ ಕರ್ತವ್ಯನಿರತ ಅಧಿಕಾರಿ ಪೌರಾಯುಕ್ತೆಯಾಗಿರುವ ಅಮೃತಗೌಡ ಅವರಿಗೆ ಪೋನಾಯಿಸಿ ಅತ್ಯಂತ ಹೇಯಕರವಾಗಿ ನಿಂದಿಸಿ, ಅವಾಚ್ಯ ಪದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿರುವ ಸ್ಥಳೀಯ ನಿವಾಸಿ ರಾಜೀವ್ ಗೌಡ ಎಂಬಾತನು, ಪೌರ ಕಾರ್ಮಿಕರ ವೃತ್ತಿ ಪರತೆಯ ಮೇಲೆ ಅಸಾಂವಿಧಾನಿಕವಾಗಿ ದುರ್ವರ್ತನೆಯಲ್ಲಿ ದಾಳಿ ಮಾಡಿ, ಅಶ್ಲೀಲ ಪದಗಳಿಂದ ಬೈದು, ಚಪ್ಪಲಿಯಲ್ಲಿ ಹೊಡೆಸುತ್ತೇನೆ, ಕಛೇರಿಯನ್ನೇ ಸುಟ್ಟುಹಾಕಿಸುವೆ, ಜನರನ್ನು ದಂಗೆ ಎಬ್ಬಿಸುವೆ, ಇತ್ಯಾದಿ ಪದಗಳಿಂದ ಮಾತಾಡಿ, ಅಪಮಾನಿಸುವುದು, ಪ್ರಚೋದಿಸುವುದು, ಮಹಿಳಾ ಅಧಿಕಾರಿಯ ತೇಜೋವಧೆ ಮಾಡಿರುವುದು, ಪರಿಶಿಷ್ಟ ಜಾತಿ-ಪಂಗಡಗಳ ವರ್ಗಗಳ ಅಧಿಕವಿರುವ ಪೌರಕಾರ್ಮಿಕರ ಮೇಲೆ ಶೋಷಣೆ ಮಾಡಿ ಗುಂಡಾವರ್ತನೆಗೈದಿರುವ ರಾಜೀವ್ ಗೌಡನ ಮೇಲೆ ಗುಂಡಾಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸುವಂತೆ ಆದೇಶಿಸಲು 'ದ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ' ನಿಂದ ರಾಜ್ಯಪಾಲರಿಗೆ ವಿವಿಧ ಆಯೋಗಗಳಿಗೆ ಮನವಿ ಸಲ್ಲಿಸಿದೆ.  ಮನವಿಯಲ್ಲಿರುವಂತೆ ಜ.೧೩ರ ಮಂಗಳವಾರದಂದು ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆಯಾಗಿರುವ ಅಮೃತಗೌಡರವರಿಗೆ ಪೋನಾಯಿಸಿರುವ ಇಲ್ಲಿನ ಸ್ಥಳೀಯ ನಿವಾಸಿ ರಾಜೀವ್ ಗೌಡ ಎಂಬಾತನು ಮನಬಂದಂತೆ ನಿಂದಿಸಿ, ಕೊಲೆ ಬೆದರಿಕೆ ಹಾಗೂ ಪೌರಕಾರ್ಮಿಕರಿಗೆ ಶೋಷಣೆಯ ದಾಳಿ ಮಾಡಿರುವ ಈತನ ವರ್ತನೆ ಅನಾಗರೀಕವಾದುದ್ದಾಗಿದೆ ಎಂದು 'ದ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ' ತಿಳಿಸಿದೆ. 

 ಇಲ್ಲಿನ ನೆಹರು ಮೈದಾನದಲ್ಲಿ ಹಮ್ಮಿಕೊಂಡಿದ್ದ 'ಕಲ್ಟ್' ಕನ್ನಡ ಸಿನಿಮಾದ ಪ್ರಮೋಷನ್‌ಗಾಗಿ ಅನಧಿಕೃತವಾಗಿ ಯಾವುದೇ ಪರವಾನಿಗೆ ಇಲ್ಲದೆ ಅಳವಡಿಸಿದ್ದ ಬ್ಯಾನರ್‌ಗಳಲ್ಲಿ ಒಂದು ಬ್ಯಾನರ್ ಸಂಚಾರಿ ವಾಹನಗಳಿಗೆ ತೊಂದರೆಯಾಗಿದ್ದು, ಸದರಿ ಅಕ್ರಮ ಬ್ಯಾನರ್ ಅಳವಡಿಕೆಯಿಂದ ಅಪಘಾತ ಸಂಭವಿಸುತ್ತಿದೆ ಇದನ್ನು ತೆರವುಗೊಳಿಸಿ ಎನ್ನುವ ನಾಗರೀಕರ ಕರೆಗಳಿಂದ ಆಯುಕ್ತೆಯಾಗಿರುವ ಅಮೃತಗೌಡರವರು ಅದನ್ನು ಪೌರಾಕಾರ್ಮಿಕರ ಮೂಲಕ ತೆರವುಗೊಳಿಸಿದ್ದು ಅಪರಾಧವಾಗಿತೇ..?! ಇದು ನಾಗರೀಕ ಕರ್ತವ್ಯವಾಗಿದ್ದು ಸಂಚಾರಿ ಅಪಘಾತಗಳನ್ನು ತಪ್ಪಿಸುವಲ್ಲಿ ತೆರವುಗೊಳಿಸಿದ್ದು ಕರ್ತವ್ಯಪರತೆಯಾಗಿದೆ, ಇದನ್ನೇ ನೆವ ಮಾಡಿಕೊಂಡು ಪೋನಾಯಿಸಿರುವ ರಾಜೀವ್ ಗೌಡ ಎಂಬಾತನು ಗುಂಡಾವರ್ತನೆಗೈದು ಕೊಲೆ ಬೆದರಿಕೆಯೊಡ್ಡಿರುವುದು ಅಲ್ಲದೆ ಅತ್ಯಂತ ದಯನೀಯವಾಗಿ, ಅಮಾನವೀಯ ವರ್ತನೆಯಿಂದ ಅಪಮಾನಿಕರಿಸಿರುವುದು ಅಸಾಂವಿಧಾನಿಕವಾಗಿದ್ದು ಅಲ್ಲದೆ, ನಾಗರೀಕ ಬದುಕಿನ ಕಾಯ್ದೆಗೆ ಚ್ಯುತಿ ಬರುವಂತೆ ನಡೆದುಕೊಂಡಿರುವ ಆಡಿಯೋ ಸಹಿತ ದೂರು ಸಲ್ಲಿಕೆಯಾಗಿದೆ. ಮುಕ್ತವಾಗಿ ಅಧಿಕಾರ ನಿರ್ವಹಣೆಗೆ ಮುಂದಾಗಿದ್ದ ಓರ್ವ ಉನ್ನತ ಮಟ್ಟದ ಮಹಿಳಾ ಅಧಿಕಾರಿ ಎಂದು ಗೌರವಿಸದೇ ಹೀನಾಯ ಮಟ್ಟದಲ್ಲಿ, ಬೈದು, ಅಪಮಾನಿಕರಿಸಿ ಜನಪರ ಸರ್ಕಾರಿ ವೃತ್ತಿಗೆ ಅಡ್ಡಿಯಾಗಿ, ನಗರಸಭೆಯ ಕಛೇರಿಯನ್ನು ಸುಟ್ಟು ಹಾಕಿಸುವೆ, ಚಪ್ಪಲಿಯಲ್ಲಿ ಹೊಡೆಸುವೆ, ಅವನಮ್ಮನ್ ಸೂಳೆಮಕ್ಕಳು, ಬೋಳಿಮಗ ಎನ್ನುವ ಅಶ್ಲೀಲ ಪದಗಳಿಂದ ನಿಂದನೆ ಮಾಡಿದ್ದಲ್ಲದೆ, ಪ್ರಚೋದಾತ್ಮಕವಾಗಿ ನಡೆದುಕೊಂಡಿರುವ ರಾಜೀವ್ ಗೌಡನ ಮೇಲೆ ಗುಂಡಾಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸುವಂತೆ ಆದೇಶಿಸಲು 'ದ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ' ಆಗ್ರಹಿಸಿದೆ. ಪೌರಾಕಾರ್ಮಿಕರು ಎನ್ನುವ ಕಾರಣಕ್ಕಾಗಿ ಇಂದಿಗೂ ನಾಗರೀಕ ಸಮಾಜ ನೋಡುತ್ತಿರುವ ದೃಷ್ಠಿಕೋನಗಳೇ ಶೋಷಣೆಮಯವಾಗಿದೆ, ಇನ್ನೂ ಆಯಾ ವ್ಯಾಪ್ತಿಯ ನಾಲ್ಕಾರು ಲಕ್ಷಜನಸಂಖ್ಯೆಯ ಮಂದಿಗಳು ಮಾಡುವ ಕಸಗಳು,     ಕೇವಲ ಮೂನ್ನೂರಕ್ಕು ಕಡಿಮೆ ಪೌರಕಾರ್ಮಿಕರು ಸ್ವಚ್ಚತೆಗೊಳಿಸದಿದ್ದರೆ, ನಾಗರೀಕ ಸಮುದಾಯದಲ್ಲಿ ಸಾಂಕ್ರಮಿಕ ವೈರಸ್‌ಗಳ ಬಾಧೆಗಳು ಕಾಡಿ ಮರಣ ಹೊಂದಬೇಕಾದ ಪರಿಸ್ಥಿತಿಯಿಂದ ಒರ್ವ ಸಾಮಾಜಿಕ ಯೋಧರಂತೆ ನಾಗರೀಕರ ಜೀವ-ಜೀವನ ಆರೋಗ್ಯಗಳನ್ನು ರಕ್ಷಿಸುತ್ತಿರುವ ಪೌರಕಾರ್ಮಿಕರನ್ನು ಈ ಹೊತ್ತಿನ ಆಧುನಿಕತೆಯಲ್ಲಿ, ಕಾಲಮಾನದಲ್ಲಿಯು ಸಮಾಜದ ಮುಖ್ಯವಾಹಿನಿಯಲ್ಲಿ ಇನ್ನೂ ಕಡೆಗಣಿಸುತ್ತಿರುವ ಶೋಷಣೆಗಳು ಜೀವಂತವಾಗಿರುವುದಕ್ಕೆ ರಾಜೀವ್ ಗೌಡ ಎಂಬುವ ಅನಾಗರೀಕರಿಂದ ಸಾಕ್ಷ್ಯವಾಗಿದೆ, ಇಂತಹ ವಿಷಮ ಪರಿಸ್ಥಿತಿಯ ಘಟಿತ ಘಟನೆಗಳ ಜೀವನಿಲುವುಗಳನ್ನು ತಾವುಗಳು ಅರ್ಥೈಸಿಕೊಂಡು ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ವತಿಯಿಂದ ಸಲ್ಲಿಸುತ್ತಿರುವ ಈ ದೂರು ಸ್ವೀಕರಿಸಿ ಈ ಕೂಡಲೇ ತ್ವರಿತ ಕ್ರಮಕ್ಕಾಗಿ, ಈ ದೂರಿನನ್ವಯ ಪ್ರತ್ಯೇಕ ಕಾನೂನು ಕ್ರಮಕ್ಕಾಗಿ ಆದೇಶಿಸಬೇಕು ತಿಳಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾರಕ್ಷಣಾಧಿಕಾರಿಗಳಿಗೆ ಒತ್ತಾಯಿಸಿದೆ. ಮನವಿ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಗಾರಾ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಎನ್.ವಿ ನವೀನ್‌ಕುಮಾರ್, ಕಾನೂನು ಮಾರ್ಗದರ್ಶಕರಾದ ಎಲ್.ಗೀತಾಮಾನೆ ಸಾಮಾಜಿಕ ನ್ಯಾಯದ ಮಾರ್ಗದರ್ಶಕರಾದ ಜಿ.ಎನ್ ಗೋಪಿನಾಥ್ ಹಾಗೂ ಉಪಾಧ್ಯಕ್ಷರಾದ ಎಲ್.ಕೆ ಪರಮೇಶ್ವರ, ಸಹ ಕಾರ್ಯದರ್ಶಿ ಹೆಚ್.ಎಲ್ ಅನಿಲ್‌ಕುಮಾರ್, ನಿರ್ದೇಶಕರುಗಳಾದ ಚಿರಂಜೀವಿ ಬಾಬು, ಭರತ್ ಗುತ್ತಿ, ರೇಕೇಶ್ ಮಾನೆ ರವರುಗಳು ಉಪಸ್ಥಿತರಿದ್ದರು.

Post a Comment

0Comments

Post a Comment (0)