ಫೆಬ್ರವರಿ 07 ರಂದು ಉದ್ಘಾಟನಾ ಸಮಾರಂಭ

varthajala
0

 ಫೆಬ್ರವರಿ 07 ರಂದು ಬೆಳಗ್ಗೆ 10.30 ಗಂಟೆಗೆ ಉದ್ಘಾಟನಾ ಕಾರ್ಯಕ್ರಮವಿದ್ದು, ಲೋಕೋತ್ಸವದ ದಿವ್ಯ ಸಾನಿಧ್ಯವನ್ನು ರಾಮನಗರದ ಶ್ರೀ ಆದಿಚುಂಚನಗಿರಿ ಮಠದ ಶಾಖಾ ಮಠಾಧೀಶರಾದ ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಅವರು ವಹಿಸಲಿದ್ದು, ಉದ್ಘಾಟನೆಯನ್ನು ಚಲನಚಿತ್ರ ಮತ್ತು ರಂಗಭೂಮಿಯ ಪ್ರಖ್ಯಾತ ನಿರ್ದೇಶಕರಾದ ಡಾ. ಟಿ.ಎಸ್. ನಾಗಾಭರಣ ಅವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಕೆ.ವಿ. ಪ್ರಭಾಕರ್ ಅವರು ಆಗಮಿಸಲಿದ್ದಾರೆ. ಕರಕುಶಲ ಮಳಿಗೆಗಳ ಉದ್ಘಾಟನೆಯನ್ನು ಮಾಜಿ ಶಾಸಕರು ಹಾಗೂ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಕೆ. ರಾಜು ಅವರು ಮಾಡಲಿದ್ದಾರೆ. ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಎ. ಇಕ್ಬಾಲ್ ಹುಸೇನ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಕಲಾ ಪ್ರದರ್ಶನ :ಫೆಬ್ರವರಿ 07 ರಂದು ಮಧ್ಯಾಹ್ನ 2.00 ಗಂಟೆಯಿಂದ ರಾತ್ರಿ 9.30 ಗಂಟೆವರೆಗೆ ರಾಜ್ಯದ ಎಲ್ಲ ಭಾಗಗಳಿಂದ ಬರುವ ವಿದ್ಯಾರ್ಥಿ ಕಲಾವಿದರಿಂದ ವೈವಿಧ್ಯಮಯ ಜನÀಪದ ನೃತ್ಯ, ಕಲಾ ಪ್ರದರ್ಶನ ಹಾಗೂ ಗೀತಗಾಯನ ಕಾರ್ಯಕ್ರಮವಿರುತ್ತದೆ. ಪ್ರಮುಖವಾಗಿ ನಗಾರಿ ಮೇಳ, ವೀರಗಾಸೆ ಕುಣಿತ, ಸೋಮನ ಕುಣಿತ, ಕಂಗೀಲು ಕುಣಿತ, ತಮಟೆ ವಾದನ, ಸಂಬಾಳ ವಾದನ, ಜನಪದ ಹಾಡಿಗೆ ನೃತ್ಯ, ಬುಡಕÀಟ್ಟ್ಟು ಹಾಡಿಗೆ ನೃತ್ಯ, ಕರಪಾಲ ಮೇಳ, ಕಂಸಾಳೆ, ಗಾರುಡಿ ಗೊಂಬೆ, ಕೊಂಬು ಕಹಳೆ, ಪಟಾ ಕುಣಿತ, ಡೊಳ್ಳು ಕುಣಿತ, ಹಗಲು ವೇಷ, ವೀರಭದ್ರ ಕುಣಿತ, ನೀಲಗಾರರ ಪದ - ಹೀಗೆ ಅನೇಕ ಬಗೆಯ ಕಲಾ ಪ್ರದಶರ್Àನವಿರುತ್ತದೆ.

ಜನಪದ ರೂಪಕ :ಮೊದಲ ದಿನದ ಸಂಜೆ ರಾತ್ರಿ 8 ಗಂಟೆಗೆ ಜಾನಪದ ಲೋಕದ ಜನಪದ ಮಹಾವಿದ್ಯಾಲಯದ
ವಿದ್ಯಾರ್ಥಿಗಳು  ಅಭಿನಯಿಸಲಿರುವ ಬೈರ್ನಳ್ಳಿ ಶಿವರಾಮು ಅವರ ನಿರ್ದೇಶನದ “ಕೆರೆಗೆ ಹಾರ” ಜಾನಪದ ರೂಪಕವಿರುತ್ತದೆ.

ಚರ್ಚೆ-ಸಂವಾದ ಕಾರ್ಯಕ್ರಮ : ಫೆಬ್ರವರಿ 08 ರಂದು ಬೆಳಿಗ್ಗೆ 10-30ಕ್ಕೆ ಯುವಜನರಲ್ಲಿ ಜನಪದ ಗಾಯನ ಮತ್ತು ಕಲೆಗಳ ಸಂವರ್ಧನೆ’’ ಎಂಬ ವಿಷಯದ ಮೇಲೆ ಚರ್ಚೆ-ಸಂವಾದ ಗೋಷ್ಠಿ ಕಾರ್ಯಕ್ರಮವಿದ್ದು, ವಿದ್ವಾಂಸರು ಮತ್ತು ಕಲಾವಿದರು ಭಾಗವಹಿಸುತ್ತಾರೆ. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರು ಪ್ರಾಸ್ತಾವಿಕ ಮಾತುಗಳನ್ನು ಆಡಲಿದ್ದಾರೆ. ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಕೆ. ಚಿನ್ನಪ್ಪಗೌಡ ಅವರು ಆಶಯ ನುಡಿಗಳನ್ನಾಡಲಿದ್ದು, ಹಿರಿಯ ರಂಗಕರ್ಮಿ ಹಾಗೂ ಜನಪದ ಸಂರ್ವಧಕರಾದ ಶ್ರೀನಿವಾಸ ಜಿ. ಕಪ್ಪಣ್ಣ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ. ಸತೀಶ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಸುಮಾರು ನಲವತ್ತಕ್ಕಿಂತ ಹೆಚ್ಚು ಜನ ವಿದ್ವಾಂಸರು, ಸಾಹಿತಿಗಳು ಈ ಸಂವಾದದಲ್ಲಿ ಭಾಗವಹಿಸಲಿದ್ದಾರೆ.
 
ಜನಪದ ಗೀತ ಗಾಯನೋತ್ಸವ : ಫೆಬ್ರವರಿ 08 ರಂದು ಮಧ್ಯಾಹ್ನ 1-30 ರಿಂದ 4-00 ಗಂಟೆವರೆಗೆ ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿಯಾಗಿದ್ದ ದಿ. ಎಚ್.ಎನ್. ನಂಜರಾಜ್ ಮತ್ತು ದಿ. ಶ್ರೀಮತಿ ಇಂದಿರಾ ಬಾಲಕೃಷ್ಣ ಅವರುಗಳ ಸ್ಮರಣಾರ್ಥ ಆಹ್ವಾನಿತ ಗ್ರಾಮೀಣ ಮೂಲ ಜನಪದ ಗಾಯಕರಿಂದ ಜನಪದ ಗೀತ ಗಾಯನೋತ್ಸವವು ನಡೆಯಲಿದೆ. ಹಿರಿಯ ಕಿರಿಯ ಜನಪದ ಹಾಡುಗಾರರಿಂದ ಜನಪದ ಸಂಗೀತ ವೈಭವವು ಅನಾವರಣಗೊಳ್ಳಲಿದೆ.
 
ಬುಡಕಟ್ಟು ಕಲೆಗಳ ಆಕರ್ಷಣೆ : ಫೆಬ್ರವರಿ 08 ರಂದು ಸಂಜೆ 4-00 ಗಂಟೆಯಿಂದ 4-30ರವರೆಗೆ ಬುಡಕಟ್ಟು ಕಲೆಗಳ ಆಕರ್ಷಣೆಯಾಗಿ ಸಿದ್ದಿಯರ ಡಮಾಮಿ ನೃತ್ಯ ಮತ್ತು ಸೋಲಿಗರ ನೃತ್ಯವು ಇರುತ್ತದೆ.

ಜನಪದ ಗೀತ ಸಂಭ್ರಮ : ಫೆಬ್ರವರಿ 08 ರಂದು ಸಂಜೆ 4-30 ಗಂಟೆಯಿಂದ 5-30 ರವರೆಗೆ ಆಧುನಿಕ ಗಾಯಕರ ಜನಪದ ಗೀತ ಸಂಭ್ರಮ ಕಾರ್ಯಕ್ರಮವಿದ್ದು, ಇದರಲ್ಲಿ ಡಾ. ಅಪ್ಪಗೆರೆ ತಿಮ್ಮರಾಜು, ಡಾ. ವೇಮಗಲ್ ನಾರಾಯಣಸ್ವಾಮಿ, ಸಿ.ಎಂ. ನರಸಿಂಹಮೂರ್ತಿ, ರಾಜಪ್ಪ ಕೋಲಾರ, ಕು. ಚೈತ್ರ ಶಿವನಾಗ್ ಮತ್ತು ಕು. ಸ್ಪಂದನ ಬಾಲು ಅವರು ತಮ್ಮ ಗಾಯನವನ್ನು ನಡೆಸಿಕೊಡಲಿದ್ದಾರೆ.

ಹಿರಿಯ ಜನಪದ ಕಲಾವಿದರು ಮತ್ತು ವಿದ್ವಾಂಸರಿಗೆ ಪ್ರಶಸ್ತಿ ಪ್ರದಾನ : ಫೆಬ್ರವರಿ 08 ರಂದು ಸಂಜೆ 5-30 ಗಂಟೆಗೆ ಕಲಾವಿದರು ಮತ್ತು ವಿದ್ವಾಂಸರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಿದ್ದು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಈ ಸಮಾರಂಭದ ದಿವ್ಯಸಾನಿಧ್ಯ ವಹಿಸುತ್ತಾರೆ. ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರು ಹಾಗು ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವಾದ ರಾಮಲಿಂಗಾರೆಡ್ಡಿ ಅವರು ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಲೇಖಕರು ಹಾಗೂ ಆಂಧ್ರಪ್ರದೇಶದ ವಾಣಿಜ್ಯ ತೆರಿಗೆ ಇಲಾಖೆ, ಪ್ರಧಾನ ಆಯಕ್ತರಾದ ಜಯರಾಮ್ ರಾಯಪುರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮಕ್ಕಳ ಯಕ್ಷಗಾನ :  ಅಂದು ರಾತ್ರಿ 7-30 ರಿಂದ 9-00 ಗಂಟೆವರೆಗೆ ಮಂಡ್ಯ ಕರ್ನಾಟಕ ಸಂಘ ಪ್ರಸ್ತುತ ಪಡಿಸುವ ಮಕ್ಕಳ ಮೂಡಲಪಾಯ ಯಕ್ಷಗಾನ “ಕರ್ಣಾರ್ಜುನರ ಕಾಳಗ” ಪ್ರಸಂಗವಿರುತ್ತದೆ. ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕು, ದೊಡ್ಡಬ್ಯಾಡರಹಳ್ಳಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿಗಳು ಈ ಪ್ರಸಂಗವನ್ನು ನಡೆಸಿಕೊಡಲಿದ್ದಾರೆ. ಈ ಎರಡು ದಿನಗಳಂದು ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ.

ಜಾನಪದ ಲೋಕ ಪ್ರಶಸ್ತಿಗೆ ಭಾಜನರಾಗಿರುವವರು : ನಾಡೋಜ ಎಚ್.ಎಲ್. ನಾಗೇಗೌಡ - ಜಾನಪದ ಲೋಕಶ್ರೀ ಪ್ರಶಸ್ತಿ - ಪ್ರೊ.ಹಿ.ಶಿ. ರಾಮಚಂದ್ರೇಗೌಡ, ಜಾನಪದ ವಿದ್ವಾಂಸರು, ಮೈಸೂರು ಜಿಲ್ಲೆ, ಡಾ. ಜೀ.ಶಂ. ಪರಮಶಿವಯ್ಯ ಜಾನಪದ ಪ್ರಶಸ್ತಿ- ಪ್ರೊ. ಕೆ. ಚಿನ್ನಪ್ಪಗೌಡ, ಜಾನಪದ ವಿದ್ವಾಂಸರು, ದಕ್ಷಿಣ ಕನ್ನಡ ಜಿಲ್ಲೆ, ನಾಡೋಜ ಡಾ. ಜಿ. ನಾರಾಯಣ - ಜಾನಪದ ಲೋಕ ಪ್ರಶಸ್ತಿ- ಚಿಕ್ಕಣ್ಣ, ಗಣೆ ವಾದನ ಕಲಾವಿದರು, ತುಮಕೂರು ಜಿಲ್ಲೆ, ಶ್ರೀಮತಿ ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿ - ಡಾ. ಸಿರಿಗಂಧ ವಿ. ಶ್ರೀನಿವಾಸಮೂರ್ತಿ, ಛಾಯಾಗ್ರಾಹಕರು/ಜಾನಪದ ತಜ್ಞರು, ಬೆಂಗಳೂರು ದೊಡ್ಡ ಆಲಹಳ್ಳಿ ಗೌರಮ್ಮ ಕೆಂಪೇಗೌಡ ಪ್ರಶಸ್ತಿ - ಶಿವಮಾದಯ್ಯ, ಪೂಜಾಕುಣಿತ ಕÀಲಾವಿದರು, ಬೆಂಗಳೂರು ದಕ್ಷಿಣ ಜಿಲ್ಲೆ ಮತ್ತು ಬೈರಪ್ಪ (ಗಂಗಣ್ಣ), ಮೂಡಲಪಾಯ ಯಕ್ಷಗಾನ ಕಲಾವಿದರು, ಬೆಂಗಳೂರು ದಕ್ಷಿಣ ಜಿಲ್ಲೆ ಅವರು ಭಾಜನರಾಗಿದ್ದಾರೆ.

ಜಾನಪದ ಲೋಕ ಪ್ರಶಸ್ತಿಗಳು : ಶ್ರೀಮತಿ ಚಿನ್ನಮ್ಮ, ಜೋಗುಳಪದ ಹಾಡುಗಾರರು, ಚಾಮರಾಜನಗರ ಜಿಲ್ಲೆ, ದೇವರಾಜು, ಪೂಜಾ ಕುಣಿತ ಕಲಾವಿದರು, ಮಂಡ್ಯ ಜಿಲ್ಲ್ಲೆ, ನಾರಾಯಣಪ್ಪ ಮಾಡಶಿರಾವಾರ, ತತ್ವಪದ ಕಲಾವಿದರು, ರಾಯಚೂರು ಜಿಲ್ಲೆ,  ಎಂ. ತಂಬೂರಿ ಸಿದ್ದರಾಜು, ತಂಬೂರಿ ಕಲಾವಿದರು, ಬೆಂಗಳೂರು, ಮುತ್ತಪ್ಪ ಬಸವಂತಪ್ಪ ದಾತನಾಳ, ಸಾಹಸ ಕಲಾವಿದರು, ಧಾರವಾಡ ಜಿಲ್ಲೆ, ಚನಿಯಪ್ಪÀ ನಾಯ್ಕ, ಯಕ್ಷಗಾನ ವೇಷಧಾರಿ ಕಲಾವಿದರು, ಕಾಸರಗೋಡು, ಕೇರಳ ಜಿಲ್ಲೆ, ಶ್ರೀಮತಿ ಟಿ. ಶಾರದಮ್ಮ, ಸೋಬಾನೆ ಹಾಡುಗಾರರು, ಚಿಕ್ಕಮಗಳೂರು ಜಿಲ್ಲೆ, ಶ್ರೀಮತಿ ಭಾರತಿಬಾಯಿ, ಲಂಬಾಣಿ ನೃತ್ಯ ಕಲಾವಿದರು, ಬೀದರ್ ಜಿಲ್ಲೆ, ಬಿ.ಎಸ್. ಗೌಡ (ಬೀರಪ್ಪ ಶಿವು ಗೌಡ), ಯಕ್ಷಗಾನ ಕಲಾವಿದರು, ಉತ್ತರ ಕನ್ನಡ  ಜಿಲ್ಲೆ, ಡಾ: ಎಸ್. ರತ್ನಮ್ಮ, ಸೋಲಿಗ ಕಲಾವಿದರು, ಚಾಮರಾಜನಗರ ಜಿಲ್ಲೆ, ಗಂಗಪ್ಪ ಮಹಾಲಿಂಗಪ್ಪ ಕರಡಿ, ಕರಡಿ ಮಜಲು ಕಲಾವಿದರು, ಬಾಗಲಕೋಟೆ  ಜಿಲ್ಲೆ ಮತ್ತು ಎಂ. ಬಸವರಾಜು, ಗೊರವ ಕುಣಿತ ಕಲಾವಿದರು, ಬೆಂಗಳೂರು ಉತ್ತರ ಅವರು ಭಾಜನರಾಗಿದ್ದಾರೆ.
ಲೋಕ ಸರಸ್ವತಿ ಗ್ರಂಥ ಪ್ರಶಸ್ತಿಗೆ “ಸ್ವಾತಂತ್ರ್ಯದ ಕಿಡಿಗಳು’’ ಪುಸ್ತಕದ ಲೇಖಕರಾದ ಬೆಂಗಳೂರಿನ ಹೂಲಿ ಶೇಖರ್ ಅವರು ಭಾಜನರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Post a Comment

0Comments

Post a Comment (0)