ಜಾನಪದ ಲೋಕದಲ್ಲಿ ವಿದ್ಯಾರ್ಥಿ ಜಾನಪದ ಲೋಕೋತ್ಸವ – 2026

varthajala
0

 ಬೆಂಗಳೂರು : ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ಬೆಂಗಳೂರು-ಮೈಸೂರು ಹಳೇ ಹೆದ್ದಾರಿಯಲ್ಲಿರುವ  ಜಾನಪದ ಲೋಕದಲ್ಲಿ ಫೆಬ್ರವರಿ 07 ಮತ್ತು 08 ರಂದು ಪ್ರತಿಷ್ಠಿತ “ವಿದ್ಯಾರ್ಥಿ ಜಾನಪದ ಲೋಕೋತ್ಸವ -2026” ಏರ್ಪಡಿಸಲಾಗಿದೆ.ವಿದ್ಯಾರ್ಥಿ ಜಾನಪದ  ಲೋಕೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ಜನಪದ ಕಲಾವಿದರೇ ಭಾಗವಹಿಸುತ್ತಿರುವುದು ವಿಶೇಷವಾಗಿದೆ.

ಆದ್ಯತೆ ವಿದ್ಯಾರ್ಥಿ ಕಲಾವಿದರಿಗಾದರೂ ಹಿರಿಯ ಮೂಲ ಕಲಾ ತಂಡಗಳೂ ಭಾಗವಹಿಸುತ್ತವೆ. ಎರಡೂ ದಿನಗಳಂದು ದಿನವಿಡೀ ವಿವಿಧ ಜನಪದ ಸಾಂಸ್ಕøತಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಅಯೋಜಿಸಲಾಗಿದೆ.ವಿದ್ಯಾರ್ಥಿ ಜಾನಪದ ಲೋಕೋತ್ಸವ ಪ್ರದಾನವಾಗಿ ಯುವ ಜನರನ್ನು ಮತ್ತೆ ಮರಳಿ ಜಾನಪದಕ್ಕೆ ಸೆಳೆಯುವ ಆಶಯವನ್ನು ಇಟ್ಟುಕೊಂಡಿದೆ.

ನಾಡಿನ ನಾನಾ ಶಾಲಾ-ಕಾಲೇಜುಗಳಲ್ಲಿ ಕೆಲವು ವಿದ್ಯಾರ್ಥಿಗಳು ಆಸ್ಥೆಯಿಂದ ಜನಪದ ಕಲೆಗಳನ್ನೂ, ಜನಪದ ಗಾಯನವನ್ನೂ ಕಲಿತು ಪ್ರದರ್ಶನ ಮಾಡುತ್ತಿದ್ದಾರೆ. ಅಂಥವರಿಗಾಗಿಯೇ ಈ ಲೋಕೋತ್ಸವವನ್ನು ಮುಡುಪಾಗಿಡುವ ಮೂಲಕ, ಮತ್ತಷ್ಟು ವಿದ್ಯಾರ್ಥಿ ಸಮುದಾಯವನ್ನು ಆಕರ್ಷಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.ಇಂದಿನ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಜನಪ್ರಿಯ ಕಾರ್ಯಕ್ರಮಗಳಲ್ಲಿ ಕಳೆದು ಹೋಗುತ್ತಿರುವ ಯುವ ಸಮುದಾಯದ ಮನಸ್ಸುಗಳನ್ನು ಮತ್ತೆ ಪರಂಪರೆಯ ಮೌಲ್ಯಯುತ ಆಲೋಚನೆಗೆ ಹಚ್ಚುವ ಕಾರ್ಯ ಆಗಬೇಕಾಗಿದೆ. ಈ ದೃಷ್ಟಿಯಿಂದ ವಿದ್ಯಾರ್ಥಿ ಜಾನಪದ ಲೋಕೋತ್ಸವ ಮಹತ್ವ ಪಡೆದಿದೆ.

Post a Comment

0Comments

Post a Comment (0)