ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರವು “ಅಂಗಳದಲ್ಲಿ ತಿಂಗಳ ಪುಸ್ತಕ” ಯೋಜನೆಯಡಿ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಡಾ. ಗಿರೀಶ ಕಾರ್ನಾಡ್ ಅವರ 88ನೇ ಜಯಂತಿಯ ಅಂಗವಾಗಿ ಅವರ “ತಲೆದಂಡ” ನಾಟಕ ಕುರಿತು ಕಾರ್ಯಕ್ರಮ ಆಯೋಜಿಸಿದೆ.ಖ್ಯಾತರಂಗ ಕರ್ಮಿಗಳಾದ ಸಿ.ಬಸವಲಿಂಗಯ್ಯ ಅವರು ಈ ಕೃತಿ ಕುರಿತು ಮಾತನಾಡಲಿದ್ದಾರೆ. ಇದೇ ಫೆಬ್ರವರಿ 12 ರಂದು ಮಧ್ಯಾಹ್ನ 2:00 ಗಂಟೆಗೆ ಜೈನ್ (ಡೀಮ್ಡ್-ಟು-ಬಿ-ಯೂನಿವರ್ಸಿಟಿ) ಸ್ಕೂಲ್ ಆಫ್ ಕಾಮರ್ಸ್, ಸಿಎಸ್‍ಎಸ್ & ಐಟಿಎಸ್‍ಎಚ್ & ಎಸ್‍ಎಸ್‍ನ ಕನ್ನಡ ಭಾμÁ ವಿಭಾಗ ಹಾಗೂ ಆದಿಕವಿ ಪಂಪ ಸಂಶೋಧನಾ ವೇದಿಕೆ, ಜೆ.ಜಿ.ಐನಾಲೆಡ್ಜ್ ಕ್ಯಾಂಪಸ್, 9ನೇ ಬಡಾವಣೆ, ಜಯನಗರ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಡೀಮ್ಡ್-ಟು-ಬಿ-ಯೂನಿವರ್ಸಿಟಿಯ ಭಾμÁ ವಿಭಾಗ, ಮುಖ್ಯಸ್ಥರಾದ ಮೇಜರ್ ಡಾ.ರೇಖಾಸಿನ್ಹಾ ಅವರು ಉಪಸ್ಥಿತರಿರುತ್ತಾರೆ. ಡೀಮ್ಡ್-ಟು-ಬಿ-ಯೂನಿವರ್ಸಿಟಿಯ ಸ್ಕೂಲ್ ಆಫ್ ಕಾಮರ್ಸ್‍ನ ಕನ್ನಡ ಭಾμÁ ವಿಭಾಗದ ಸಂಯೋಜಕರಾದ ಶ್ರೀಮತಿ ರಾಜೇಶ್ವರಿ ವೈ.ಎಂ.ಅವರು ಭಾಗವಹಿಸಲಿದ್ದಾರೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್‍ಸಿಂಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.