ಬೆಂಗಳೂರು : ಕರ್ನಾಟಕ ಸರ್ಕಾರದ ಅಬಕಾರಿ ಇಲಾಖೆಯು 2025-26ನೇ ಸಾಲಿನಲ್ಲಿ ಪಾರದರ್ಶಕತೆ, ಡಿಜಿಟಲೀಕರಣ ಮತ್ತು ಭ್ರμÁ್ಟಚಾರ ಮುಕ್ತ ಆಡಳಿತಕ್ಕೆ ಆದ್ಯತೆ ನೀಡಿದ್ದು, ಹಲವು ಐತಿಹಾಸಿಕ ಸುಧಾರಣೆಗಳನ್ನು ಜಾರಿಗೆ ತಂದಿದೆ.
ಆರ್ಥಿಕ ಸಾಧನೆ ಮತ್ತು ಪ್ರಗತಿ: ರಾಜಸ್ವ ಸಂಗ್ರಹಣೆ: 2025-26ನೇ ಸಾಲಿಗೆ ರೂ. 40,000 ಕೋಟಿ ಆರ್ಥಿಕ ಗುರಿ ಹೊಂದಲಾಗಿದ್ದು, ಜನವರಿ-2025ರ ಅಂತ್ಯಕ್ಕೆ ರೂ. 33,371.47 ಕೋಟಿ ಸಂಗ್ರಹಿಸಲಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 13.72 ರಷ್ಟು (ರೂ. 3,910.87 ಕೋಟಿ) ಹೆಚ್ಚಿನ ಬೆಳವಣಿಗೆಯಾಗಿದೆ.
ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ:ಡಿಜಿಟಲ್ ಕೌನ್ಸೆಲಿಂಗ್: ಇಲಾಖೆಯ ಇತಿಹಾಸದಲ್ಲೇ ಮೊದಲ ಬಾರಿಗೆ 2025ರ ಹೊಸ ವರ್ಗಾವಣೆ ನಿಯಮಗಳ ಅಡಿಯಲ್ಲಿ ಮೆರಿಟ್ ಆಧಾರಿತ 'ಡಿಜಿಟಲ್ ಕೌನ್ಸೆಲಿಂಗ್' ಮೂಲಕ ಅಧಿಕಾರಿ/ನೌಕರರ ವರ್ಗಾವಣೆ ಮಾಡಲಾಗುತ್ತಿದೆ.
ಭ್ರμÁ್ಟಚಾರಕ್ಕೆ ಮುಕ್ತಿ: ಲೋಕಾಯುಕ್ತ ಪ್ರಕರಣ, ಇಲಾಖಾ ವಿಚಾರಣೆ ಎದುರಿಸುತ್ತಿರುವ ಅಥವಾ ದಂಡನಾವಧಿಯಲ್ಲಿರುವ ಅಧಿಕಾರಿಗಳಿಗೆ ಯಾವುದೇ ಕಾರ್ಯನಿರ್ವಾಹಕ ಹುದ್ದೆಗಳನ್ನು ನೀಡಬಾರದೆಂಬ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಲಾಗಿದೆ.
ಕಡ್ಡಾಯ ವರ್ಗಾವಣೆ: ಬೆಂಗಳೂರಿನಲ್ಲಿ 5 ವರ್ಷ ಸೇವೆ ಸಲ್ಲಿಸಿದವರನ್ನು ಕಡ್ಡಾಯವಾಗಿ ಹೊರ ಜಿಲ್ಲೆಗಳಿಗೆ ವರ್ಗಾಯಿಸಲಾಗುವುದು.
ಸನ್ನದು (ಲೈಸನ್ಸ್) ನವೀಕರಣ ಸರಳೀಕರಣ: 5 ವರ್ಷಗಳ ಅವಧಿ: ಸನ್ನದು ನವೀಕರಣವನ್ನು ಪ್ರತಿ ವರ್ಷ ಮಾಡುವ ಬದಲು 5 ವರ್ಷಕ್ಕೊಮ್ಮೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ಸನ್ನದುದಾರರು 2030ರವರೆಗೆ ಪದೇ ಪದೇ ನವೀಕರಣ ಮಾಡುವ ಅಗತ್ಯವಿಲ್ಲ.
ಸ್ಥಳ ಪರಿಶೀಲನೆ ಮುಕ್ತಿ: ಸನ್ನದುದಾರರ ಮಾಹಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೆ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವ ಪ್ರಮೇಯವಿಲ್ಲದೆ ಆನ್‍ಲೈನ್ ಮೂಲಕವೇ ಸ್ವಯಂಚಾಲಿತವಾಗಿ ನವೀಕರಣಗೊಳ್ಳುತ್ತದೆ.
ತ್ವರಿತ ಸೇವೆ: ಈ ವರ್ಷ ದಾಖಲೆ ಎಂಬಂತೆ 14,101 ಸನ್ನದುಗಳನ್ನು ಕೇವಲ 48 ಗಂಟೆಗಳಲ್ಲಿ ಯಾವುದೇ ದೂರುಗಳಿಲ್ಲದಂತೆ ಆನ್‍ಲೈನ್ ಮೂಲಕ ನವೀಕರಿಸಲಾಗಿದೆ.
ಮುಖರಹಿತ (ಫೇಸ್‍ಲೆಸ್) ಸೇವೆಗಳು:Excise ERP Software: ಇಲಾಖೆಯ ಒಟ್ಟು 41 ಸೇವೆಗಳನ್ನು ಸಂಪೂರ್ಣವಾಗಿ ‘ಮುಖರಹಿತ' (ಫೇಸ್‍ಲೆಸ್) ಹಾಗೂ ಆನ್‍ಲೈನ್ ಮಾಡಲಾಗಿದೆ.ಸ್ವಯಂಚಾಲಿತ ಮಂಜೂರಾತಿ: ನಿಗದಿತ ಕಾಲಮಿತಿಯೊಳಗೆ (ಟೈಮ್-ಬಾಂಡ್) ಅರ್ಜಿಗಳು ವಿಲೇವಾರಿಯಾಗದಿದ್ದಲ್ಲಿ, ಅವುಗಳು ಸ್ವಯಂಚಾಲಿತವಾಗಿ ಮಂಜೂರಾಗುವ ವ್ಯವಸ್ಥೆ ಮಾಡಲಾಗಿದೆ.
ಹೊಸ ಸನ್ನದು ಮಂಜೂರಾತಿ ಮತ್ತು ಇ-ಹರಾಜು: ಹಂತಗಳ ಕಡಿತ: ಸನ್ನದು ಮಂಜೂರಾತಿ ಪ್ರಕ್ರಿಯೆಯಲ್ಲಿದ್ದ 16 ಹಂತಗಳನ್ನು ಕೇವಲ 7 ಹಂತಗಳಿಗೆ ಇಳಿಸುವ ಮೂಲಕ ಉದ್ದಿಮೆದಾರರಿಗೆ ಅನುಕೂಲ ಮಾಡಿಕೊಡಲಾಗಿದೆ.
ಇ-ಹರಾಜು: ರಾಜ್ಯದ 579 ಖಾಲಿ ಸನ್ನದುಗಳನ್ನು (ಸಿಎಲ್-2, ಸಿಎಲ್ -9, ಸಿಎಲ್ -11ಸಿ) ಕೇಂದ್ರ ಸರ್ಕಾರದ ಎಂಎಸ್‍ಟಿಸಿ ಸಂಸ್ಥೆಯ ಮೂಲಕ ಅತ್ಯಂತ ಪಾರದರ್ಶಕವಾಗಿ ಇ-ಹರಾಜು ಮಾಡಲಾಗುವುದು. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿಯನ್ನು ನೀಡಲಾಗಿದೆ.
ಅಕ್ರಮ ತಡೆ ಮತ್ತು ಡ್ರಗ್ಸ್ ಮುಕ್ತ ಅಭಿಯಾನ: ಬೆಂಗಳೂರು ಉತ್ತರ ವಿಭಾಗವೊಂದರಲ್ಲೇ ಸುಮಾರು ರೂ. 5.34 ಕೋಟಿ ಮೌಲ್ಯದ ಡ್ರಗ್ಸ್‍ಗಳನ್ನು ಪತ್ತೆ ಹಚ್ಚಿ ನಾಶಪಡಿಸಲಾಗಿದೆ. ಗಡಿ ರಾಜ್ಯಗಳ ಅಬಕಾರಿ ನೀತಿಗಳಿಂದಾಗುವ ಅಕ್ರಮಗಳನ್ನು ತಡೆಯಲು ಬಿಗಿ ಕ್ರಮ ಕೈಗೊಳ್ಳಲಾಗಿದೆ.