ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಶಿಲ್ಪಶ್ರೀ ಪ್ರಶಸ್ತಿ ಪ್ರಕಟ

varthajala
0

ಬೆಂಗಳೂರು : ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2024 ಮತ್ತು 2025ನೇ ಸಾಲಿನ ಗೌರವ ಪ್ರಶಸ್ತಿಗಳು ಹಾಗೂ 2024ನೇ ಸಾಲಿನ ‘ಶಿಲ್ಪಶ್ರೀ’ ಪ್ರಶಸ್ತಿ ಪುರಸ್ಕøತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಈ ಸಾಧಕರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಗೌರವ ಪ್ರಶಸ್ತಿಯು ತಲಾ ರೂ. 50,000/- ನಗದು, ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ ಹಾಗೂ ಶಿಲ್ಪಶ್ರೀ ಪ್ರಶಸ್ತಿ ಪುರಸ್ಕøತರಿಗೆ ತಲಾ ರೂ. 25,000/- ನಗದು ಹಾಗೂ ಗೌರವ ಸನ್ಮಾನವನ್ನು ನೀಡಲಾಗುವುದು.

2024ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕøತರು:ಎ.ಪಿ. ಶ್ರೀಕಂಠಾಚಾರ್ಯ (ಸಂಪ್ರದಾಯ ಶಿಲ್ಪ), ದಾವಣಗೆರೆ, ಸಾಯಿನಾಥ ಭೀಮರಾಯಪ್ಪ (ಸಂಪ್ರದಾಯ ಶಿಲ್ಪ), ಧಾರವಾಡ, ಸೋಮಚಾರಿ (ಸಂಪ್ರದಾಯ ಶಿಲ್ಪ), ಹಾವೇರಿ, ರಾಜಬಾಬು (ಸಿಮೆಂಟ್ ಶಿಲ್ಪ), ಮೈಸೂರು ಮತ್ತು  ಎಂ.ಕೆ. ಗಿರೀಶ್‍ಕುಮಾರ್ (ಸಮಕಾಲೀನ ಶಿಲ್ಪ), ವಿಜಯನಗರ ಅವರುಗಳು 2024ನೇ ಸಾಲಿನ ಗೌರವ  ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

2025ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕøತರು: ಕಲ್ಲಣ್ಣ ಸಾಯಬಣ್ಣ ಕಂಬಾರ (ಸಂಪ್ರದಾಯ ಶಿಲ್ಪ), ಕಲಬುರಗಿ, ಅರವಿಂದ ವಿ. ಬಡಿಗೇರ (ರಥ ಶಿಲ್ಪ), ರಾಯಚೂರು, ಯಚ್ಚರಪ್ಪ ನಾಗಲಿಂಗಪ್ಪ ಪತ್ತಾರ (ಸಂಪ್ರದಾಯ ಶಿಲ್ಪ), ಗದಗ್, ಅರುಣ ಬುಕ್ಕಾ ಗುಡಿಗಾರ (ಸಂಪ್ರದಾಯ ಶಿಲ್ಪ), ಉತ್ತರ ಕನ್ನಡ ಮತ್ತು ಕೆ. ರಾಘವೇಂದ್ರ (ಸಮಕಾಲೀನ ಶಿಲ್ಪ), ಮೈಸೂರು ಅವರುಗಳು 2025ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

2024ನೇ ಸಾಲಿನ ‘ಶಿಲ್ಪಶ್ರೀ’ ಪ್ರಶಸ್ತಿ ಪುರಸ್ಕøತರು: ಬಸ್ತಿ ಸದಾಶಿವ ಶೆಣೈ (ದಕ್ಷಿಣ ಕನ್ನಡ), ದೇವಿಪ್ರಸಾದ್ ಎಂ. ಮಾಯಾಚಾರ್ಯ (ಬಾಗಲಕೋಟೆ), ಮಂಜುನಾಥ ಡಿ ಬಾರ್ಕಿ (ಹಾವೇರಿ), ರಾಜೇಶ್ ಎಂ. ಪತ್ತಾರ (ಗದಗ್), ಆನಂದ ಹಾವನೂರು (ಬೆಳಗಾವಿ), ನವೀನ್ ಕಡ್ಲಾಸ್ಕರ್ (ಧಾರವಾಡ), ಕೆ.ಎನ್. ಕೃಷ್ಣಮೂರ್ತಿಚಾರ್ (ಚಿತ್ರದುರ್ಗ), ವಿಪಿನ್ ಭದೌರಿಯಾ (ಬೆಂಗಳೂರು), ಸಿ.ಪಿ. ವಿಶ್ವನಾಥ್ (ತುಮಕೂರು) ಮತ್ತು ಎಂ. ಶರಣ್ (ಬೆಂಗಳೂರು ದಕ್ಷಿಣ) ಅವರುಗಳು 2024ನೇ ಸಾಲಿನ ‘ಶಿಲ್ಪಶ್ರೀ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಇದಲ್ಲದೆ, 19ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ-2025ಕ್ಕೆ ರಾಜ್ಯದ ವಿವಿಧ ಭಾಗಗಳ ಶಿಲ್ಪಿಗಳಾದ ಬಿ. ಬ್ರಹ್ಮಚಾರಿ (ವಿಜಯನಗರ ಜಿಲ್ಲೆ), ಪುರುμÉೂೀತ್ತಮ ಎಲ್., ಹಾಗೂ ರಾಘವೇಂದ್ರ ಎಸ್. (ಶಿವಮೊಗ್ಗ ಜಿಲ್ಲೆ), ಪ್ರದೀಪ್ ಕುಮಾರ್ ಡಿ.ಎಂ. (ದಾವಣಗೆರೆ), ವಿಶ್ವೇಶ್ವರ ಪರ್ಕಳ (ಉಡುಪಿ ಜಿಲ್ಲೆ) ಮತ್ತು ಕೆ.ಎಸ್. ಸ್ವಾತೀಶ್ (ಮಂಡ್ಯ ಜಿಲ್ಲೆ) ಅವರುಗಳು 19ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ-2025 ರ ಕಲಾಕೃತಿಗಳ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ.
ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 19 ನೇಯ ವಾರ್ಷಿಕ ಶಿಲ್ಪಕಲಾ ಪ್ರದರ್ಶನ 2025 ಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಬಂದಂತಹ ಸಾಂಪ್ರದಾಯಿಕ ಮತ್ತು ಸಮಕಾಲೀನ, ಜಾನಪದ ಶೈಲಿಯ ಕಲಾಕೃತಿಗಳಲ್ಲಿ ಆಯ್ಕೆ ಮತ್ತು ನಿರ್ಣಾಯಕ ಸಮಿತಿಯು 06 ಶಿಲ್ಪಿಗಳ ಶಿಲ್ಪಕಲಾಕೃತಿಗಳನ್ನು ಅಕಾಡೆಮಿ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ ಹಾಗೂ ಮೈಸೂರಿನ ರಾಮ್ ಸನ್ ಕಲಾ ಪ್ರತಿಷ್ಠಾನದ ಮನೋಹರ ಕಾಳಪ್ಪ ಪತ್ತಾರ (ವಿಜಯಪುರ), ಅರೇನಾ ಅನಿಮೇಶನ್ ಮಲ್ಲೇಶ್ವರಂ ಬೆಂಗಳೂರು ಹಾಗೂ ವೇದಾತ್ಮ ಕಾಲೇಜ್ ಆಫ್ ಡಿಸೈನ್ ಆಫ್ ಟೆಕ್ನಾಲಜಿ ಮ್ಯಾನೇಜ್ ಮೆಂಟ್ ವಾರ್ಷಿಕ ಶಿಲ್ಪಕಲಾ ಪ್ರದರ್ಶನಕ್ಕೆ ಬಂದಿರುವ ಶಿಲ್ಪಕಲಾಕೃತಿಗಳಲ್ಲಿ ತಲಾ ಒಂದೊಂದು ಶಿಲ್ಪಕಲಾಕೃತಿಗೆ ಬಹುಮಾನ ಹಾಗೂ ತಲ್ಲೂರು ಪ್ಯಾಮಿಲಿ ಟ್ರಸ್ಟ್ (ರಿ) ಉಡುಪಿ ಜಿಲ್ಲೆ ಇವರು ವಾರ್ಷಿಕ ಶಿಲ್ಪಕಲಾ ಪ್ರದರ್ಶನಕ್ಕೆ ಬಂದಿರುವ ಎರಡು ಶಿಲ್ಪಕಲಾ ಕೃತಿಗಳ ಬಹುಮಾನಕ್ಕೆ ಆಯ್ಕೆ ಮಾಡಲಾಗಿದ್ದು, ಇವರಿಗೆ ಶಿಲ್ಪಕಲಾ ಕೃತಿ ಬಹುಮಾನ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಪ್ರದಾನ ಹಾಗೂ ಶಿಲ್ಪಕಲಾ ಪ್ರದರ್ಶನವನ್ನು ಮಾರ್ಚ್-2026ರ ಮಾಹೆಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅಕಾಡೆಮಿಯ ಅಧ್ಯಕ್ಷರಾದ ಎಂ.ಸಿ. ರಮೇಶ್ ಹಾಗೂ ರಿಜಿಸ್ಟ್ರಾರ್ ಆರ್. ಚಂದ್ರಶೇಖರ ಅವರು ತಿಳಿಸಿದ್ದಾರೆ.

Post a Comment

0Comments

Post a Comment (0)