2026 ನೇ ಸಾಲಿನ ರಸ್ತೆ ಸಂಚಾರ ಗಣತಿ

varthajala
0
ಬೆಂಗಳೂರು : ಕರ್ನಾಟಕ ರಾಜ್ಯದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಓಡಾಡುವ ವಾಹನಗಳ ಗಣತಿಯನ್ನು ನಡೆಸಲಾಗುತ್ತಿದ್ದು, 2026 ನೇ ಸಾಲಿನ ರಸ್ತೆ ಸಂಚಾರ ಗಣತಿಯನ್ನು ಫೆಬ್ರವರಿ 26 ರ ಬೆಳಿಗ್ಗೆ 6.00 ಗಂಟೆಯಿಂದ ಫೆಬ್ರವರಿ 27 ರ ಬೆಳಿಗ್ಗೆ 6.00 ಗಂಟೆಯವರೆಗೆ ಸತತವಾಗಿ 02 ದಿನಗಳ ಕಾಲ ನಡೆಯಲಿದೆ.

ಗಣತಿಗೆ ಈಶಾನ್ಯ ವಲಯದ ಕಲಬುರಗಿ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳ ಮೇಲೆ 370 ಗಣತಿ ಕೇಂದ್ರಗಳನ್ನು ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ 692 ಗಣತಿ ಕೇಂದ್ರಗಳನ್ನು, ಒಟ್ಟು 1062 ಗಣತಿ ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ ಎಂದು ಶರಣಪ್ಪಾ ಸುಲಗಂಟೆ ಮುಖ್ಯ ಇಂಜಿನೀಯರ್ ಸಂಪರ್ಕ ಮತ್ತು ಕಟ್ಟಡಗಳು (ಈಶಾನ್ಯ) ಲೋಕೋಪಯೋಗಿ ಇಲಾಖೆ ಕಲಬುರಗಿ ಇವರು ತಿಳಿಸಿದ್ದಾರೆ.

ಗಣತಿಯ ಮುಖ್ಯ ಉದ್ದೇಶಗಳು:
ಪ್ರತಿ ರಸ್ತೆಯ ಸಂಚಾರದ ಬೆಳವಣೆಗೆಯ ತೀವ್ರತೆಯನ್ನು ಅಳೆಯುವುದು. ಪ್ರಸ್ತೂತದಲ್ಲಿ ಇರುವ ರಸ್ತೆಗಳನ್ನು ದುರಸ್ತಿ ಪಡಿಸುವಲ್ಲಿ ಹಾಗೂ ರಸ್ತೆಯನ್ನು ಇನ್ನು ಉತ್ತಮ ಪಡಿಸಲು ಸಹಾಯಕವಾಗುವುದು. ರಸ್ತೆಯ ಸಂಚಾರದ ಬೆಳವಣೆಗೆಯ ತೀವ್ರತೆಯನ್ನು ಗಮನಿಸಿ ರಸ್ತೆಯ ಅಗಲೀಕರಣ ಗೊಳಿಸುವುದು. ರಸ್ತೆಗಳನ್ನು ಮೇಲ್ದರ್ಜೇಗೆರಿಸುವಲ್ಲಿ ಈ ಗಣತಿಯ ವರದಿ ಪ್ರಮುಖ್ಯವಾಗಿರುತ್ತದೆ. ರಸ್ತೆಯ ಸಂಚಾರದ ಗಣತಿಯಿಂದ ವಾಹನ ಅಪಘಾತಗಳನ್ನು ತಡೆಯಲು ಕ್ರಮ ತೆಗೆದುಕೂಳ್ಳಲು ಅನುಕೂಲವಾಗುತ್ತದೆ. ರಸ್ತೆ ಸಂಚಾರ ಗಣತಿಯಿಂದ ಆ ರಸ್ತೆ ಮೇಲೆ ಯಾವ ರೀತಿ ವಾಹನ ಸಂಚಾರ ಅಧೀಕವಾಗುತ್ತಿದೆ ಎನ್ನುವುದನ್ನು ತಿಳಿಯುವುದರಿಂದ ಹಲವಾರು ರಸ್ತೆಗಳ ಅಭಿವೃದ್ದಿ ಕಾರ್ಯಕ್ರಮವನ್ನು ಸರ್ಕಾರ ಮಟ್ಟದಲ್ಲಿ ರೂಪಿಸಲು ಅನುಕುಲವಾಗುತ್ತದೆ. ಸಂಚಾರ ಗಣತಿಯನ್ನು ಯಶಸ್ವಿಯಾಗಿಸಲು ವಾಹನ ಚಾಲಕರು ಮತ್ತು ಸಾರ್ವಜನಿಕರು ತಮ್ಮ ವಾಹನಗಳನ್ನು ನಿಧಾನವಾಗಿ ಚಲಿಸಿ ಸಹಕರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

 

Post a Comment

0Comments

Post a Comment (0)