ಬೆಂಗಳೂರು : ಸುಬ್ರಹ್ಮಣ್ಯನಗರದ ಶ್ರೀ ವ್ಯಾಸರಾಜ ಮಠ(ಸೋಸಲೆ)ದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಫೆಬ್ರವರಿ 15, ಭಾನುವಾರ ಬೆಳಗ್ಗೆಯ ಪೂಜಾ ಕೈಂಕರ್ಯಗಳಲ್ಲಿ ಶ್ರೀ ರುದ್ರ ದೇವರಿಗೆ ಫಲಪಂಚಾಮೃತ ಅಭಿಷೇಕ, ರುದ್ರಚಮಕ ಪಾರಾಯಣ, ರುದ್ರ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ಸಂಜೆಯ ಕಾರ್ಯಕ್ರಮದಲ್ಲಿ ಭಜನೆ,
ರಥೋತ್ಸವ. ನಂತರ ಯುವ ಗಾಯಕ ಶ್ರೀ ಶಿಶಿರ್ ಕೆ.ಪಿ. ಮತ್ತು ಸಂಗಡಿಗರಿಂದ "ದಾಸವಾಣಿ ಕಾರ್ಯಕ್ರಮ". ಸ್ಥಳ : ಶ್ರೀ ವ್ಯಾಸರಾಜ ಮಠ (ಸೋಸಲೆ), 5ನೇ ಮುಖ್ಯರಸ್ತೆ, 'ಎ' ಬ್ಲಾಕ್, ರಾಜಾಜಿನಗರ 2ನೇ ಹಂತ, ಸುಬ್ರಹ್ಮಣ್ಯನಗರ, ಬೆಂಗಳೂರು-560010
ಸರ್ವರಿಗೂ ಆತ್ಮೀಯ ಸುಸ್ವಾಗತ
