ಬೆಂಗಳೂರು : ತ್ಯಾಗರಾಜನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶಿವರಾತ್ರಿ ಪ್ರಯುಕ್ತ ಫೆಬ್ರವರಿ 15, ಭಾನುವಾರ ಬೆಳಗ್ಗೆ ರುದ್ರ ಪಾರಾಯಣ, ಕ್ಷೀರಾಭಿಷೇಕ, ವಿಶೇಷ ಅಲಂಕಾರ, ಮಹಾ ಮೃತ್ಯುಂಜಯ ಹೋಮ, ಪೂರ್ಣಾಹುತಿ ಮಹಾಮಂಗಳಾರತಿ. ಸಂಜೆ 6-00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿ ಶ್ರೀಮತಿ ಸಂಧ್ಯಾ ಶ್ರೀನಾಥ್ ಇವರಿಂದ "ಶಿವ ಶಿವ ಶಿವ ಎನ್ನಿರೋ" ಎಂಬ ಶೀರ್ಷಿಕೆಯಲ್ಲಿ ವಿಶೇಷ ದಾಸವಾಣಿ ಕಾರ್ಯಕ್ರಮ ಏರ್ಪಡಿಸಿದ್ದು, ಇವರ ಗಾಯನಕ್ಕೆ ಕೀ-ಬೋರ್ಡ್ ವಾದನದಲ್ಲಿ ಶ್ರೀ ಅಮಿತ್ ಶರ್ಮಾ, ತಬಲಾ ವಾದನದಲ್ಲಿ ಶ್ರೀ ಸರ್ವೋತ್ತಮ ಸಹಕರಿಸಲಿದ್ದಾರೆ.
ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಅಡ್ಡರಸ್ತೆ ತ್ಯಾಗರಾಜನಗರ ಬೆಂಗಳೂರು-560028
