ಮಹಿಳಾ ಆಟೋ ಚಾಲಕರು ಸಖಿವಿಮನ್ ಆಪ್ ಮೂಲಕ ಮಹಿಳೆಯರಿಗೆ ಸುರಕ್ಷಿತ ಪ್ರಯಾಣ

varthajala
0


ಬೆಂಗಳೂರು: ಡೊಡ್ಡ ಗಣಪತಿ ದೇವಸ್ಥಾನ ಅವರಣದಲ್ಲಿ ಸಖಿ ಸಾಮಾಜಿಕ ಸೇವಾ ಸಂಸ್ಥೆಯ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸಂಚಾರದ ಮೂಲಕ ಮಹಿಳೆಯರು ಸಬಲೀಕರಣಕ್ಕಾಗಿ ಸಖಿ ವಿಮನ್ ಆಪ್ ಆಟೋ ಗಳನ್ನು ಶಾಸಕರಾದ ಎಲ್.ಎ.ರವಿಸುಬ್ರಹ್ಮಣ್ಯರವರು ಬಿಡುಗಡೆಗೊಳಿಸಿದರು. ಡಿ.ಸಿ.ಪಿ.ಮಂಜುನಾಥ್ ಬಾಬು,  ವ್ಯವಸ್ಥಾಪಕ ನಿರ್ದೇಶಕಿ ಕೃಷ್ಣವಿ ಪಾರೇಖ್ ರವರು ಯೋಜನಾ ಅಧಿಕಾರಿ ಗೀತಾ ಚಂದ್ರಶೇಖರ್ ರವರು, ಸಮಾಜ ಸೇವಕರಾದ ಕೆ.ವಿ.ರಾಮಚಂದ್ರ, ವಿ.ಕೆ.ಪ್ರೋಸೆಸ್ ಮಾಲೀಕರಾದ ಬಿ.ಕೆ.ಪ್ರಸನ್ನ,  ಕರ್ನಾಟಕ ಮಹಿಳಾ ಆಟೋ ಚಾಲಕರ ಸಂಘದ ಪ್ರಭಾವತಿರವರು ಸಖಿ ವಿಮನ್ ಆಪ್ ಬಿಡುಗಡೆಗೊಳಿಸಿದರು.

ಶಾಸಕರಾದ ರವಿಸುಬ್ರಮಣ್ಯರವರು ಮಾತನಾಡಿ ಪುರುಷರಷ್ಟೆ ಮಹಿಳೆಯರು ಸರಿಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ.

ಮಹಿಳೆಯರ ಸ್ವಾವಲಂಭಿ, ಸ್ವಾಭಿಮಾನಿಯಾಗಿ ಬದುಕುಲು ಸಹಕಾರಿಯಾಗಿದೆ. ನಗರ ಪ್ರದೇಶದಲ್ಲಿ ಮಹಿಳೆಯರು ಒಂಟಿಯಾಗಿ ಪ್ರಯಾಣಿಸಲು ಭಯಪಡುತ್ತಾಳೆ,ನಿರ್ಭಿತಿಯಾಗಿ ಸಂಚಾರಿಸಲು ಸಖಿ ವಿಮನ್ ಆಫ್ ಮೂಲಕ ಆಟೋ ಬುಕ್ ಮಾಡಿದರೆ ಮಹಿಳಾ ಆಟೋ ಚಾಲಕರು ಬಂದು ಸುರಕ್ಷಿತ ತಲುಪಿಸ ಕಾರ್ಯ ಯಶ್ವಸಿಯಾಗಲಿ ಎಂದು ಹೇಳಿದರು.



ಹೆಚ್.ಮಂಜುನಾಥಬಾಬುರವರು ಮಾತನಾಡಿ  ಸೈಕಲ್, ಬೈಕ್ ಮಹಿಳೆಯರು ಓಡಿಸಿದರೆ ಆಶ್ಚರ್ಯ ಪಡುತ್ತಿರುವ ಕಾಲ ಒಂದಿತ್ತು ಅದರೆ ಕಾಲ ಬದಲಾಗಿದೆ ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಿದ್ದಾಳೆ. ಕುಟುಂಬದ ಜೊತೆಯಲ್ಲಿ ಸಮಾಜವನ್ನು ಅಭಿವೃದ್ದಿ ಪಡಿಸುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ.

ಮಹಿಳಾ ಆಟೋ ಚಾಲಕರಿಗೆ ಸುರಕ್ಷಿತ ಮತ್ತು ರಕ್ಷಣೆಗೆ ಪೊಲೀಸ್ ಇಲಾಖೆ ಸಹಕಾರ ನೀಡಲಿದೆ ಎಂದು ಹೇಳಿದರು.




Post a Comment

0Comments

Post a Comment (0)