ಬೆಂಗಳೂರು : ಕರ್ನಾಟಕದ ಮೂಲನಿವಾಸಿಗಳು ಭಾರತೀಯ ಅರೆ ಸೇನಾ ಪಡೆಗಳಾದ ಬಿಎಸ್‍ಎಫ್, ಸಿಐಎಸ್‍ಎಫ್, ಸಿಆರ್‍ಪಿಎಫ್, ಐಟಿಬಿಪಿ, ಎಸ್‍ಎಸ್‍ಬಿ ಮತ್ತು ಅಸ್ಸಾಂ ರೈಫಲ್ಸ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು ಹಾಗೂ ಸೇವೆಯಲ್ಲಿರುವಾಗ ಮತ್ತು ನಿವೃತ್ತಿಯಾದ ನಂತರ ಮರಣ ಹೊಂದಿದವರ ಅವಲಂಬಿತರು ತಮ್ಮ ವಿವರಗಳನ್ನು ಸಲ್ಲಿಸಲು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ನಿರ್ದೇಶನಾಲಯ ಸೂಚಿಸಿದೆ.
ಫೋರ್ಸ್ ನಂ, ರ್ಯಾಂಕ್, ಹೆಸರು, ಬೆಟಾಲಿಯನ್ ನಂಬರ್, ಸೇನೆಗೆ ಸೇರಿದ ದಿನಾಂಕ, ನಿವೃತ್ತಿ ಹೊಂದಿದ ದಿನಾಂಕ, ಪ್ರಸ್ತುತ ವಿಳಾಸ, ಸಂಪರ್ಕ ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಜೊತೆಗೆ ತಮ್ಮ ಸೇವಾ ಪುಸ್ತಕ ಅಥವಾ ಪಿಂಚಣಿ ಪತ್ರದ ಪ್ರತಿಯನ್ನು ಇ-ಮೇಲ್ karnatakacapf@gmail.com ಗೆ 2026ರ ಮಾರ್ಚ್ 15 ರೊಳಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.