ಜಾಮಿಯಾ ಮೊಹಮ್ಮದೀಯ ಮನ್ಸೂರ ಶಿಕ್ಷಣ ಸಂಸ್ಥೆಯಿಂದ ಧಾರ್ಮಿಕ ಬೋಧನೆ ಸಮಾವೇಶ ಹೆಸರಿನಲ್ಲಿ ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳಿಂದ ದೇಶದ ಏಕತೆ, ಭದ್ರತೆಗೆ ಧಕ್ಕೆ

varthajala
0

 ಬೆಂಗಳೂರು: ಥಣಿಸಂದ್ರದಲ್ಲಿರುವ ಜಾಮಿಯಾ ಮೊಹಮ್ಮದೀಯ ಮನ್ಸೂರ ಎಂಬ ಸಂಸ್ಥೆ ನಡೆಸುತ್ತಿರುವ ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆ ಸಮಾಜ, ದೇಶದ ಏಕತೆ, ಭದ್ರತೆಗೆ ಧಕ್ಕೆ ತರುವಂತಿದ್ದು, ಈ ಬಗ್ಗೆ ತಕ್ಷಣವೇ ಕ್ರಮ ತೆಗೆದುಕೊಳ್ಳುವಂತೆ ಇಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ ತಂದೆಯೊಬ್ಬರು ಸರ್ಕಾರಕ್ಕೆ ಲಿಖಿತವಾಗಿ ದೂರು ಸಲ್ಲಿಸಿದ್ದಾರೆ.

ವಿದ್ಯಾರ್ಥಿಯ ತಂದೆ, ಎಚ್.ಬಿ.ಆರ್. ಬಡಾವಣೆಯ ಅಬ್ದುಲ್ ರಹೀಮ್  ಎಂಬುವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಪರಮೇಶ್ವರ್, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಪೊಲೀಸ್ ಆಯುಕ್ತರು, ಕೊತ್ತನೂರು ಪೊಲೀಸ್ ಠಾಣೆ, ಶಾಲಾ ಶಿಕ್ಷಣ ಆಯುಕ್ತರು ಮತ್ತಿತರರ ಬಳಿ ದೂರು ದಾಖಲಿಸಿದ್ದಾರೆ.  ನನ್ನ ಮಗ ಮೂರು ವರ್ಷಗಳಿಂದ ಇಲ್ಲಿ ಶಿಕ್ಷಣ ಪಡೆಯುತ್ತಿದ್ದು, ನನ್ನ ಮಗನಿಗೆ ನೀಡಿದ ಮೂರು ಅಂಕಪಟ್ಟಿಗಳು, ಶಾಲಾ ಶುಲ್ಕ ರಸೀದಿಗಳು ಕೂಡ ನಕಲಿ. ಇಲ್ಲಿ ದೇಶ ದ್ರೋಹ ಚಟುವಟಿಕೆ ಜೊತೆಗೆ ಮತಾಂತರವೂ ನಿರಂತರವಾಗಿ ನಡೆಯುತ್ತಿದೆ. ಈ ಶಿಕ್ಷಣ ಸಂಸ್ಥೆ ಅನಧಿಕೃತವಾಗಿದ್ದು, ಜೊತೆಗೆ ನೋಂದಣಿಯಾಗದ ಮದರಸ ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಊಹಿಸಲೂ ಸಾಧ್ಯವಾಗದ ಹಾಗೂ ವಿವರಿಸುವುದಕ್ಕೂ ಆಗದ ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದಿದ್ದಾರೆ. 

Post a Comment

0Comments

Post a Comment (0)