*ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ; 23 ದೇಶಗಳಿಂದ 25 ಸಾವಿರ ಜನರ ಪಾಲ್ಗೊಳ್ಳುವಿಕೆ; ಹಾಗೂ ಹುಬ್ಬಳ್ಳಿ ಧಾರವಾಡ ಸೇರಿದಂತೆ, ಕರ್ನಾಟಕದಿಂದ 5000 ಕ್ಕಿಂತಲೂ ಹೆಚ್ಚಿನ ಹಿಂದೂಗಳು ಭಾಗವಹಿಸಲಿದ್ದಾರೆ.*
*ಶಂಖನಾದ ಮಹೋತ್ಸವವು ಆಧ್ಯಾತ್ಮಿಕ ಪ್ರವಾಸೋದ್ಯಮದ ಹೊಸ ಅಧ್ಯಾಯವಾಗಲಿದೆ!*
*ಹುಬ್ಬಳ್ಳಿ:* ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಇವರ 83 ನೇ ಜನ್ಮೋತ್ಸವ ಮತ್ತು ಸಂಸ್ಥೆಯ ರಜತ ಮಹೋತ್ಸವದ ಸಂದರ್ಭದಲ್ಲಿ ‘ವಿಶ್ವಕಲ್ಯಾಣಕ್ಕಾಗಿ ರಾಮರಾಜ್ಯದ ಸಮಾನ `ಸನಾತನ ರಾಷ್ಟ್ರದ ಶಂಖನಾದ ಮೊಳಗಿಸಲು ಗೋವಾದಲ್ಲಿ ಮೇ 17 ರಿಂದ 19, 2025 ವರೆಗಿನ ಸಮಯದಲ್ಲಿ ಐತಿಹಾಸಿಕ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಆಯೋಜನೆ ಮಾಡಲಾಗಿದೆ. ರಾಷ್ಟ್ರ ಮತ್ತು ಧರ್ಮರಕ್ಷಣೆಗಾಗಿ ಸಮರ್ಪಿಸಿಕೊಂಡಿರುವ ಸಂತರು, ಮಹಂತರು, ಹಿಂದುತ್ವರಕ್ಷಕರು, ವಿಚಾರವಂತರು, ಕೇಂದ್ರ ಸಚಿವರು, ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ 25 ಸಾವಿರಕ್ಕಿಂತಲೂ ಹೆಚ್ಚಿನ ಸಾಧಕರು, ಧರ್ಮಪ್ರೇಮಿ ಹಿಂದೂಗಳ ಉಪಸ್ಥಿತಿ ಇದು ಈ ಮಹೋತ್ಸವದ ವೈಶಿಷ್ಟ್ಯವಾಗಿದೆ. ಈ ದಿವ್ಯ ಶಂಖನಾದವು ರಾಮ ರಾಜ್ಯದ ಕಡೆಗೆ ಇಟ್ಟಿರುವ ಮುಂದಿನ ಹೆಜ್ಜೆಯಾಗಿದೆ. ಈ ಮಹೋತ್ಸವಕ್ಕಾಗಿ ಕರ್ನಾಟಕದಿಂದ 5 ಸಾವಿರಕ್ಕೂ ಹೆಚ್ಚಿನ ಸಾಧಕರು, ಧರ್ಮಪ್ರೇಮಿ ಹಿಂದೂಗಳು ಉಪಸ್ಥಿತರಿರುವರು, ಎಂದು ಸನಾತನ ಸಂಸ್ಥೆಯ ಸೌ. ವಿದುಲಾ ಹಳದೀಪುರ ರವರು ಮಾಹಿತಿ ನೀಡಿದರು ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ವಿವರಣೆ ನೀಡಿದರು ಈ ಸಂದರ್ಭದಲ್ಲಿ ಉಣಕಲ್ ವಾರ್ಡನ ಕಾರ್ಪೊರೇಟರಾದ ಶ್ರೀ. ರಾಜಣ್ಣ ಕೊರವಿ, ಉದ್ಯೋಗಪತಿಗಳಾದ ಶ್ರೀ. ದಯಾನಂದ ರಾವ್, ಶ್ರೀ. ಶಾಂತಣ್ಣ ಕಡಿವಾಳ, ಉಪಾಧ್ಯಕ್ಷರು ಕನಕದಾಸ ಶಿಕ್ಷಣ ಸಮಿತಿ,
ಶ್ರೀ.ಮಹಾದೇವ ಸಾಗರೇಕರ್ ರಿಟೈರ್ಡ್ ಸೂಪರಿಟೆಂಡೆಂಟ್ ಗ್ರಾಮ ಪಂಚಾಯತ, ಗೋಕಾಕ್,ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ಉಪಸ್ಥಿತರಿದ್ದರು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಮಾರ್ಗದರ್ಶನದಲ್ಲಿ ಕಳೆದ 25 ವರ್ಷಗಳಿಂದ ಸನಾತನ ಸಂಸ್ಥೆ ಆದರ್ಶ ಮತ್ತು ಸಂಸ್ಕಾರಯುತ ಪೀಳಿಗೆ ರೂಪಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಈ ರಜತ ಮಹೋತ್ಸವ ವರ್ಷದ ಪ್ರಯುಕ್ತ ನಾವು ದೇಶದಲ್ಲಿ ರಾಮರಾಜ್ಯ ಸ್ವರೂಪಿ ‘ಸನಾತನ ರಾಷ್ಟ್ರ’ ನಿರ್ಮಾಣ ಮಾಡಲು ಸಾಮೂಹಿಕ ಸಂಕಲ್ಪ ಮಾಡಿದ್ದೇವೆ. ಇದರ ಮೂಲಕ ಎಲ್ಲಾ ಆಧ್ಯಾತ್ಮಿಕ ಸಂಸ್ಥೆಗಳು ಮತ್ತು ಹಿಂದೂ ಸಂಘಟನೆಗಳಲ್ಲಿನ ಧರ್ಮಬಂಧುತ್ವ ಹೆಚ್ಚು ದೃಢವಾಗಲಿದೆ. ಸದ್ಯ ಇದು ಭಾರತದಲ್ಲಿರುವ ಆಂತರಿಕ ಮತ್ತು ಬಾಹ್ಯ ಸವಾಲುಗಳನ್ನು ಎದುರಿಸಲು ಸನಾತನ ಧರ್ಮ, ಅದರ ಮೌಲ್ಯ ಮತ್ತು ಅದರ ರಕ್ಷಣೆಯ ಬಹಳಷ್ಟು ಆವಶ್ಯಕತೆ ಇದೆ. ಒಟ್ಟಾರೆ ಗೋವು, ಗಂಗೆ, ಗಾಯತ್ರಿ, ದೇವಸ್ಥಾನಗಳು, ವೇದಾದಿ ಧರ್ಮಗ್ರಂಥಗಳಿಗೆ ಪುನರ್ವೈಭವ ನೀಡಲು ‘ಸನಾತನ ರಾಷ್ಟ್ರ’ದ ಶಂಖನಾದ ಮಾಡಲು ಈ ಮಹೋತ್ಸವ ಆಯೋಜಿಸಲಾಗಿದೆ. ಗೋವಾದ ಈ ಭವ್ಯ ಮಹೋತ್ಸವ ಧರ್ಮ ಮತ್ತು ಅಧ್ಯಾತ್ಮದ ದಿವ್ಯ ಜ್ಞಾನಗಂಗೆಯ ಪ್ರವಾಹವಾಗಿರಲಿದೆ.
ಈ ಮಹೋತ್ಸವಕ್ಕೆ, ‘ಆರ್ಟ್ ಆಫ್ ಲಿವಿಂಗ್’ನ ಸಂಸ್ಥಾಪಕ ಗುರುದೇವ ಶ್ರೀ ಶ್ರೀ ರವಿಶಂಕರಜಿ, ಪತಂಜಲಿ ಯೋಗ ಪೀಠದ ಸಂಸ್ಥಾಪಕ ಪ. ಪೂ. ಯೋಗಋಷಿ ಸ್ವಾಮಿ ರಾಮದೇವಜಿ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಕೋಷಾಧ್ಯಕ್ಷ ಪ. ಪೂ. ಸ್ವಾಮಿ ಗೋವಿಂದದೇವ ಗಿರಿಜಿ, ಕೇಂದ್ರ ವಿದ್ಯುತ್ ರಾಜ್ಯ ಸಚಿವ ಶ್ರೀಪಾದ ನಾಯಿಕ, ಉತ್ತರಪ್ರದೇಶದ ಮುಖ್ಯಮಂತ್ರಿ ಶ್ರೀ. ಯೋಗಿ ಆದಿತ್ಯನಾಥ, ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ಶ್ರೀ. ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಶ್ರೀ. ಏಕನಾಥ ಶಿಂಧೆ, ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ, ಛತ್ತೀಸ್ಗಡದ ಮುಖ್ಯಮಂತ್ರಿ ಶ್ರೀ. ವಿಷ್ಣುದೇವ ಸಾಯ, ತೆಲಂಗಾಣದ ಭಾಜಪದ ಶಾಸಕ ಟಿ. ರಾಜಾ ಸಿಂಗ್, ಹಾಗೂ ಕಾಶಿ ಮತ್ತು ಮಥುರಾದ ಪ್ರಕರಣ ನಡೆಸುತ್ತಿರುವ ನ್ಯಾಯವಾದಿ ವಿಷ್ಣುಶಂಕರ ಜೈನ್ ಸೇರಿದಂತೆ 1000 ಕ್ಕೂ ಅಧಿಕ ಗಣ್ಯರನ್ನು ಆಮಂತ್ರಿಸಲಾಗಿದೆ.
ಕರ್ನಾಟಕದಿಂದ ಈ ಭವ್ಯ ದಿವ್ಯ ಮಹೋತ್ಸವಕ್ಕಾಗಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್ ರವರು, ಮೈಸೂರು ಸಂಸದರಾದ ಯದುವೀರ ಶ್ರೀಕೃಷ್ಣದತ್ತ ಒಡೆಯರ್, ಯುವ ಬ್ರಿಗೇಡ್ ಸಂಸ್ಥಾಪಕರಾದ ಶ್ರೀ. ಚಕ್ರವರ್ತಿ ಸುಲಿಬೆಲೆ, ಕಾರ್ಪೊರೇಟರ್ ಶ್ರೀ. ರಾಜಣ್ಣ ಕೊರವಿ, ಶಿರಸಂಗಿಯ ಕಾಳಿಕಾ ದೇವಸ್ಥಾನದ ಅಧ್ಯಕ್ಷರಾದ ಬ್ರಹ್ಮರ್ಷಿ ವೇ. ಮೂ ಶ್ರೀ ಇಂದ್ರಚಾರ್ಯರು , ಹೈಕೋರ್ಟ್ ನ್ಯಾಯವಾದಿಗಳಾದ ಶ್ರೀ. ನಾರಾಯಣ ಯಾಜಿ ಮತ್ತು ಇತರ ನೂರಾರು ಗಣ್ಯರು ಭಾಗವಹಿಸಲಿದ್ದಾರೆ.
*‘ಸನಾತನ ರಾಷ್ಟ್ರ’ಕ್ಕಾಗಿ ಒಂದು ಕೋಟಿ ರಾಮನಾಮ ಜಪಯಜ್ಞ ಮತ್ತು ಸಂತ ಸಭೆ!’:* ‘ಧರ್ಮೇಣ ಜಯತಿ ರಾಷ್ಟ್ರಮ್’ (ಅರ್ಥ : ಧರ್ಮದಿಂದ ರಾಷ್ಟ್ರದ ವಿಜಯವಾಗುತ್ತದೆ.) ಇದು ಮಹೋತ್ಸವದ ಘೋಷವಾಕ್ಯವಾಗಿದೆ. ‘ಸನಾತನ ರಾಷ್ಟ್ರ’ದ ನಿರ್ಮಾಣಕ್ಕಾಗಿ ‘ರಾಮರಾಜ್ಯ ಸಂಕಲ್ಪ ಜಪ ಯಜ್ಞ’ದ ಮೂಲಕ ಒಂದು ಕೋಟಿ ಶ್ರೀರಾಮನಾಮ ಜಪ ಮಾಡಲಾಗುವುದು. ದೇಶಾದ್ಯಂತದ ಸನಾತನ ಧರ್ಮದ ಸಂತರು, ಮಹಂತರು ಹಾಗೂ ಧರ್ಮಗುರುಗಳು ತಮ್ಮ ತೇಜಸ್ವಿ ವಾಣಿಯ ಮೂಲಕ ಸನಾತನ ರಾಷ್ಟ್ರದ ಉದ್ಘೋಷ ಮಾಡಲು ಸಂತ ಸಭೆಯ ಆಯೋಜನೆ ಮಾಡಲಾಗಿದೆ.
*‘ಹಿಂದೂ ರಾಷ್ಟ್ರ ರತ್ನ’ ಮತ್ತು ‘ಸನಾತನ ಧರ್ಮಶ್ರೀ’ ಪುರಸ್ಕಾರ ವಿತರಣೆ:* ಅನೇಕ ವರ್ಷಗಳಿಂದ ಸನಾತನ ಧರ್ಮದ ಸೇವೆಗಾಗಿ ಸಮರ್ಪಿತರಾಗಿ ವಿಶೇಷ ಕಾರ್ಯ ನಡೆಸುವ ಹಿಂದೂ ವೀರರಿಗೆ ಪೂಜ್ಯ ಸಂತರಿಂದ ‘ಹಿಂದೂ ರಾಷ್ಟ್ರ ರತ್ನ’ ಈ ಜೀವನ ಗೌರವ ಪ್ರಶಸ್ತಿ, ಹಾಗೂ ಧರ್ಮಕ್ಕಾಗಿ ಹೋರಾಡುವ ಧರ್ಮರಕ್ಷಕರಿಗೆ ‘ಸನಾತನ ಧರ್ಮಶ್ರೀ’ ಈ ಪ್ರಶಸ್ತಿ ನೀಡಲಾಗುವುದು.
*ಪಾರಂಪರಿಕ ಕಲೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಕಾಲದ ಶಸ್ತ್ರಾಸ್ತ್ರಗಳ ಪ್ರದರ್ಶನ!:* ಈ ಭವ್ಯ ಕಾರ್ಯಕ್ರಮದಿಂದ ಗೋಮಂತಕದಲ್ಲಿನ ಪಾರಂಪರಿಕ ಕಲೆಯ ಪ್ರದರ್ಶನ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಕಾಲದ ಪ್ರಾಚೀನ ಶಸ್ತ್ರಾಸ್ತ್ರಗಳು ಹಾಗೂ ಸನಾತನ ಸಂಸ್ಕೃತಿ, ರಾಷ್ಟ್ರ, ಕಲೆ, ಆಯುರ್ವೇದ, ಆಧ್ಯಾತ್ಮಿಕ ವಸ್ತುಗಳ ಭವ್ಯ ಪ್ರದರ್ಶನಿ ಕೂಡ ಇರಲಿದೆ.
*ಸಂತರ ಪಾದುಕೆಗಳ ದರ್ಶನ!:* ಈ ಕಾರ್ಯಕ್ರಮದ ಪ್ರಯುಕ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಗುರು ಪ. ಪೂ. ಭಕ್ತಾರಾಜ ಮಹಾರಾಜರು, ಸಮರ್ಥ ರಾಮದಾಸ ಸ್ವಾಮೀಜಿ, ಸಜ್ಜನಗಡದ ಶ್ರೀಧರ ಸ್ವಾಮೀಜಿ, ಸಮರ್ಥರ ಶಿಷ್ಯ ಶ್ರೀ ಕಲ್ಯಾಣ ಸ್ವಾಮಿ, ಶ್ರೀ ಸಾಯಿಬಾಬಾ, ಶ್ರೀ ಸಿದ್ದಾರೂಢ ಸ್ವಾಮಿ (ಹುಬ್ಬಳ್ಳಿ), ಪ. ಪೂ. ಗಗನಗಿರಿ ಮಹಾರಾಜರು, ಪ. ಪೂ. ಗೋಂದವಲೇಕರ ಮಹಾರಾಜರು ಹೀಗೆ 10 ಕ್ಕಿಂತಲೂ ಹೆಚ್ಚಿನ ಸಂತರ ಪಾದುಕೆಗಳ ದರ್ಶನದ ಲಾಭ ಒಂದೇ ಸ್ಥಳದಲ್ಲಿ ಪಡೆಯಬಹುದು.
*‘ಮಹಾಧನ್ವಂತರಿ ಯಜ್ಞ’:* ಮೇ 19 ರಂದು ವಿಶ್ವ ಕಲ್ಯಾಣಕ್ಕಾಗಿ ಹಾಗೂ ಸನಾತನ ಧರ್ಮದವರ ಆರೋಗ್ಯಕ್ಕಾಗಿ ಮಹಾಧನ್ವಂತರಿ ಯಜ್ಞ ನಡೆಯಲಿದೆ.
*ಮಹೋತ್ಸವದಲ್ಲಿ 1000 ವರ್ಷಗಳ ಹಿಂದಿನ ಅಪರೂಪದ ಸೋಮನಾಥ ಜ್ಯೋತಿರ್ಲಿಂಗದ ದರ್ಶನ!*
“ಸನಾತನ ರಾಷ್ಟ್ರ ಶಂಖನಾದ ಉತ್ಸವದ” ಪ್ರಮುಖ ಆಕರ್ಷಣೆಯೊಂದೆಂದರೆ 1000 ವರ್ಷಗಳ ಹಿಂದಿನ ಪವಿತ್ರ ಸೋಮನಾಥ ಜ್ಯೋತಿರ್ಲಿಂಗವನ್ನು ನೋಡುವ ಅಪರೂಪದ ಅವಕಾಶವಾಗಿದೆ. ಈ ಜ್ಯೋತಿರ್ಲಿಂಗವನ್ನು ಆಕ್ರಮಣಕಾರ ಮಹ್ಮೂದ್ ಗಜ್ನಿ ಧ್ವಂಸಗೊಳಿಸಿದ್ದ. ನಂತರ ಅದನ್ನು ಅಗ್ನಿಹೋತ್ರ ಪರಂಪರೆಯ ಆದ್ಯಾತ್ಮಿಕ ಸಾಧಕರು ಸಂರಕ್ಷಿಸಿದರು. ಆರ್ಟ್ಸ್ ಆಫ್ ಲಿವಿಂಗ್ ಸಂಸ್ಥೆಯ ಸಂಸ್ಥಾಪಕ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಆಶೀರ್ವಾದದೊಂದಿಗೆ, ಈ ಜ್ಯೋತಿರ್ಲಿಂಗವನ್ನು ಮೇ 17 ರಿಂದ 19 ರವರೆಗೆ ಉತ್ಸವ ಸ್ಥಳದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುವುದು.
ಶ್ರೀ. ವಿನೋದ ಕಾಮತ,
ರಾಜ್ಯ ವಕ್ತಾರರು, ಸನಾತನ ಸಂಸ್ಥೆ
(ಸಂಪರ್ಕ : 9342599299)