ಮಲ್ಲೇಶ್ವರಂ ಬ್ರಾಹ್ಮಣ ಮಹಾಸಭಾ ಟ್ರಸ್ಟ್: ಶ್ರೀಶಂಕರ ಜಯಂತಿ, ಅಭಿನಂದನಾ ಸಮಾರಂಭ

varthajala
0

 

ಹಿಮಾಂಶು ಶಾಲೆಯ ಸಭಾಂಗಣದಲ್ಲಿ;ಮಲ್ಲೇಶ್ವರಂ ಬ್ರಾಹ್ಮಣ ಸಭಾ ಟ್ರಸ್ಟ್ ವತಿಯಿಂದ ಶ್ರೀ ಶಂಕರ ಜಯಂತ್ಯುತ್ಸವ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರು, ಉಪಾಧ್ಯಕ್ಷರು, ಜಿಲ್ಲಾ ಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭ.

ಮಲ್ಲೇಶ್ವರಂ ಬ್ರಾಹ್ಮಣ ಮಹಾಸಭಾ ಟ್ರಸ್ಟ್ ಅಧ್ಯಕ್ಷರಾದ ಪಾವಗಡ ಪ್ರಕಾಶ್ ರಾವ್ ರವರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಎಸ್.ರಘುನಾಥ್ ರವರು, ನಿವೃತ್ತ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಹಿರಿಯ ಉಪಾಧ್ಯಕ್ಷರಾದ ಆರ್.ಲಕ್ಷ್ಮಿಕಾಂತ್ ರವರು, ಖಜಾಂಚಿ ಸುಬ್ಬನರಸಿಂಹ(ಸುಬ್ಬಣ್ಣ) ಮತ್ತು ಜಿಲ್ಲಾ ಪ್ರತಿನಿಧಿಗಳಾದ ನಾಗೇಶ್ ಜಿ.ಎಸ್.ದಿಲೀಪ್ ಕುಮಾರ್ ಹಾಗೂ ವಿಪ್ರ ಮುಖಂಡರಾದ ಜಗನ್ನಾಥ್ ಸಮಾಜ ಸೇವಕರಾದ ವಲ್ಲಭ ಕೆಎಸ್.ಕಾರ್ಯದರ್ಶಿ ಎಸ್.ಕೆ.ಕೌಶಿಕ್ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

*ವಿದ್ಯಾ ವಾಚಸ್ಪತಿ ಪಾವಗಡ ಪ್ರಕಾಶ್ ರಾವ್* ರವರು ಮಾತನಾಡಿ ಇಡಿ ಪ್ರಪಂಚದಲ್ಲಿ ಶ್ರೀ ಶಂಕರಾಚಾರ್ಯ ಮಾಡಿದ ಸಾಧನೆ ಯಾರು ಸಾಧನೆ ಮಾಡಲು ಸಾಧ್ಯವಿಲ್ಲ.ಶಂಕರರು 8ವರ್ಷದ ಪ್ರಾಯದಲ್ಲಿ ಕಾಲಟಿಯಿಂದ ಕಾಶ್ಮೀರದವರಗೆ ನಡೆದುಕೊಂಡು ಹೋದರು.

ದೈವವನ್ನು ನಾವು ನೋಡಿಲ್ಲ, ನಮ್ಮ ಅಕಾರವನ್ನು ದೈವಕ್ಕೆ ಹೋಲಿಸಬೇಕು.ವಿದ್ಯೆಗೆ ಪ್ರಾಧ್ಯಾನತೆ ಕೊಡುತ್ತೇವೆ, ಬ್ರಾಹ್ಮಣರು ಎಂದರೆ ಪ್ರತಿಭಾವಂತರಾಗಿ ಇರಬೇಕು. ಜ್ಞಾನಿಗಳು ಗೆಲುವು ಸಾಧಿಸುತ್ತಾರೆ.

ಸಮಾಜದಲ್ಲಿ ಇದ್ದಾಗ, ಸಮಾನತೆಯಾಗಿ ನೋಡಿ ಎಲ್ಲರನ್ನು. 1200ವರ್ಷಗಳ ಹಿಂದೆಯೆ ಶಂಕರಾಚಾರ್ಯ ಸಾಮಾನತೆ ಕುರಿತು ಮಾತನಾಡಿದ್ದರು.

ಅಹಂ ಬ್ರಹ್ಮಸ್ಮಿ ಎಂದರೆ ನನ್ನಲ್ಲಿ ಇರುವ ದೇವರನ್ನು ಕಾಣು ಎಂದರ್ಥ

ವಿದ್ಯೆ ಕಲಿಯಲು ಎಲ್ಲರಿಗೂ ಅವಕಾಶವಿದೆ ಶಂಕಾಚಾರ್ಯರು ಸಾರಿದರು. ನಾಲ್ಕು ವಾಕ್ಯದ ಮೇಲೆ ಅದೈೃತ ಸಿದ್ದಾಂತ ನಿಂತಿದೆ.

*ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಎಸ್.ರಘುನಾಥ್* ರವರು ಮಾತನಾಡಿ ಚುನಾವಣೆ ಪೂರ್ವ ನೀಡಿದ್ದ ಭರವಸೆಗಳನ್ನು ಈಡೇರಿಸಲು ನಮ್ಮ ಹೋರಾಟ. ಶಿಕ್ಷಣ ಮತ್ತು ಆರೋಗ್ಯ ಕುರಿತು ಬೇಡಿಕೆಗಳು ಹೆಚ್ಚಾಗಿದೆ.

ಚುನಾವಣೆ ಗೆಲುವುದು ಮುಖ್ಯವಲ್ಲ, ವಿಪ್ರ ಸಮುದಾಯದವನ್ನು ಆರ್ಥಿಕವಾಗಿ ಸಬಲರಾಗಿ ಮಾಡಬೇಕು. 100ಕೋಟಿ ರೂಪಾಯಿ ದತ್ತಿ ನಿಧಿ ಸಂಗ್ರಹಕ್ಕೆ ಯೋಜನೆ ರೂಪಿಸಲಾಗಿದೆ, ಕಷ್ಟದ ಕೆಲಸವಲ್ಲ, 10ಸಾವಿರ ಶ್ರೀಮಂತ ವಿಪ್ರರನ್ನು ಸಂಪರ್ಕಿಸಲಾಗುವುದು. 

ಅಕ್ಷಯ ನಿಧಿ ಯೋಜನೆ ಜಾರಿಗೆ ತರಲಾಗಿದೆ  ದೇಣಿಗೆ ನೀಡಬಹುದು.

ನಕಲಿ ಮತದಾನ ಕಡಿವಾಣ ಹಾಕಲು ಸದಸ್ಯರಿಗೆ ಡಿಜಿಟಲ್ ಕಾರ್ಡ್ ನೀಡಲಾಗುವುದು.

ಬೈಲಾ ತಿದ್ದುಪಡಿ ಹಾಗೂ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಗಿದೆ. ಬ್ರಾಹ್ಮಣ ಸಮುದಾಯವು ಆರ್ಥಿಕ ಸಂಕಷ್ಟಗಳು ಎದುರಿಸುತ್ತಿದ್ದಾರೆ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಮಹಾಸಭಾ ಪ್ರಯತ್ನ, ಪ್ರಧಾನಿ ನರೇಂದ್ರಮೋದಿ ರವರಿಗೆ ಹಾಗೂ ಭಾರತೀಯ ಸೈನಿಕರಿಗೆ ಶಕ್ತಿ ತುಂಬುವಲ್ಲಿ ಎಲ್ಲ ದೇವಸ್ಥಾನ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.

ಭಾಸ್ಕರ್ ರಾವ್ ರವರು ಮಾತನಾಡಿ ಶ್ರೀ ಶಂಕರಚಾರ್ಯ ತತ್ವ, ಸಿದ್ದಾಂತಗಳು ಎಲ್ಲರು ತಿಳಿಯಬೇಕು. 8 ವರ್ಷದ ಬಾಲಕ ಶಂಕರರ ಸಾಧನೆ ಕೀರ್ತಿ ಇಡಿ ವಿಶ್ವಕ್ಕೆ ಗೊತ್ತು.

ವಿಪ್ರರು ಬುದ್ದಿ ಮೂಲಕ ಶಕ್ತಿ ತೋರಿಸಬೇಕು. ವಿಜ್ಞಾನಿ ರಾಮ್ ರಾವ್ ರವರು ಐರನ್ ಡೋಮ್ ಕಂಡು ಹಿಡಿದರು. ವಿಂಗ್ ಕಮಾಂಡರ್ ಶುಕ್ಲರವರಸಾಹಸ ಮೆಚ್ಚುವಂತದು. ವಿಪ್ರರು ಗುಣ, ಪರಿಶ್ರಮ ಮತ್ತು ವಿದ್ಯೆ ಇದ್ದಾಗ ಮುಂದೆ ಬರಲು ಸಾಧ್ಯ.

ಬ್ರಾಹ್ಮಣರು ಉತ್ತಮವಾಗಿ ಆಡಳಿತ  ನಡೆಸುತ್ತಾರೆ, ಮುಖ್ಯಮಂತ್ರಿಗಳಾಗಿ ಆರ್.ಗುಂಡೂರಾವ್, ರಾಮಕೃಷ್ಣಹೆಗಡೆರವರು ಉತ್ತಮ ಆಡಳಿತ ರಾಜ್ಯಕ್ಕೆ ನೀಡಿದ್ದರು

ತಂದೆ, ತಾಯಿಯನ್ನ ಮಕ್ಕಳು ಮರೆಯಬಾರದು, ಅವರ ಅಶೀರ್ವಾದದಿಂದ ನಾವು ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಧೈರ್ಯಂ ಸರ್ವತ್ರ ಸಾಧನಂ ಮಾತಿನಂತೆ ಬ್ರಾಹ್ಮಣರಿಗೆ ಧೈರ್ಯ ಹೆಚ್ಚು  ಎಂದು ಹೇಳಿದರು.

ಆರ್.ಲಕ್ಷ್ಮಿಕಾಂತ್ ಕರ್ನಾಟಕ ಸರ್ಕಾರ ಶಂಕರ ಜಯಂತಿ ಅಚರಣೆ ಮಾಡುತ್ತಿದೆ. ಬ್ರಾಹ್ಮಣ ಮಹಾಸಭಾ ಅಧ್ಯಕ್ಷರನ್ನ ಅತಿಥಿಯಾಗಿ ಕರೆಯಬೇಕು ಎಂದು ಸರ್ಕಾರ ಮನವಿ ಸಲ್ಲಿಸಲಾಯಿತು, ಅಧ್ಯಕ್ಷರಿಗೆ ಮುಖ್ಯ ಅತಿಥಿಯಾಗಿ ಸರ್ಕಾರ ಆಹ್ವಾನ ನೀಡಿರುವುದಕ್ಕೆ ಸರ್ಕಾರಕ್ಕೆ ಧನ್ಯವಾದಗಳು.

*ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಎಸ್.ರಘುನಾಥ್, ಹಿರಿಯ ಉಪಾಧ್ಯಕ್ಷ ಆರ್.ಲಕ್ಷ್ಮಿಕಾಂತ್, ಖಜಾಂಚಿ ಸುಬ್ಬನರಸಿಂಹ, ಜಿಲ್ಲಾಪ್ರತಿನಿಧಿ ನಾಗೇಶ್, ದಿಲೀಪ್ ಕುಮಾರ್ ಅಭಿನಂದನೆ ಸಲ್ಲಿಸಿ, ಸನ್ಮಾನಿಸಲಾಯಿತು.

Post a Comment

0Comments

Post a Comment (0)