ನಾಡಪ್ರಭು ಕೆಂಪೇಗೌಡ ಲೇಔಟ್ ಅಭಿವೃದ್ಧಿ ಕಾರ್ಯಗಳು ಶೀಘ್ರವೇ ಪೂರ್ಣ-ಬಿಡಿಎ ಭರವಸೆ

varthajala
0

 




ಬೆಂಗಳೂರು: ನಗರದ ಕೆಜಿ ಲೇಔಟ್ ನಲ್ಲಿ ಬಹುತೇಕ ಕೆಲಸಗಳು ಈಗಾಗಲೇ ಪೂರ್ಣಗೊಂಡಿದ್ದು ಉಳಿದ ಶೇ.೧೦ ರಷ್ಟು ಕೆಲಸವನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಿಡಿಎ ಭರವಸೆ ನೀಡಿದೆ,

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹೊಸ ನಿವೇಶನ ಹಂಚಿಕೆದಾರರದೊAದಿಗೆ ಮೂಲಭೂತ ಸೌಲಭ್ಯಗಳನ್ನು ಒದಿಗಿಸುವ ಕುರಿತು ಸಭೆ ನಡೆಸಿದ್ದು, ಶೀಘ್ರವೇ ಬಡಾವಣೆಯ ಕೆಲಸವನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಿವೇಶನ ಪಡೆದವರಿಗೆ ತಿಳಿಸಲಾಯಿತು, 

ಬಡಾವಣೆಯ ವಿವಿಧ ಭಾಗಗಳಲ್ಲಿ ಹರಡಿರುವ ೫೫೦ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಭೂ ಮಾಲೀಕರು ಹೈಕೋರ್ಟ್ ನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದರು, ಬಿಡಿಎಗೆ ಈ ವಿಷಯವನ್ನು ಇತ್ಯರ್ಥಪಡಿಸಲು ನ್ಯಾಯಾಲಯವು ಮೂರು ತಿಂಗಳ ಅವಧಿ ನೀಡಿತ್ತು, ಅದರಂತೆ ಭೂಮಾಲೀಕರಿಂದ ಮನವಿ ಸ್ವೀಕರಿಸಲಾಯಿತು, ಬಡಾವಣೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮುಂದುವರೆದಿದೆ, ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದಿಂದ ಉಂಟಾದ ವಿಳಂಬವನ್ನು ಗುರುತಿಸಿದ ಪ್ರಾಧಿಕಾರವು, ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ನಿವೇಶನ ಮಾಲೀಕರಿಗೆ ಸಭೆಯಲ್ಲಿ ಭರವಸೆ ನೀಡಿದೆ, 


Post a Comment

0Comments

Post a Comment (0)