ನಮ್ಮ ಕುಟುಂಬದ ಮೂಲ ಪಾಕಿಸ್ತಾನ: ಶಾರುಖ್ ಖಾನ್

varthajala
0

 




ಶಾರುಖ್ ಖಾನ್ ಹಿಂದಿ ಚಿತ್ರರಂಗದ ಅತ್ಯಂತ ಜನಪ್ರಿಯ ತಾರೆಗಳಲ್ಲಿ ಒಬ್ಬರು. ಶಾರುಖ್ ಖಾನ್ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಹೆತ್ತವರನ್ನು ಕಳೆದುಕೊಂಡರು. ಶಾರುಖ್ ಬಾಲಿವುಡ್‌ಗೆ ಪದಾರ್ಪಣೆ ಮಾಡುವ ಮೊದಲೇ ಅವರ ತಂದೆ ತಾಯಿ ನಿಧನರಾದರು. ಅವರ ತಾಯಿ ಲತೀಫ್ ಫಾತಿಮಾ ಖಾನ್ ಮತ್ತು ತಂದೆ ತಾಜ್ ಮೊಹಮ್ಮದ್ ಖಾನ್.

ಶಾರುಖ್ ಖಾನ್ ಕೇವಲ 15 ವರ್ಷದವರಿದ್ದಾಗ ತಮ್ಮ ತಂದೆ ತಾಜ್ ಮೊಹಮ್ಮದ್ ಖಾನ್ ಅವರನ್ನು ಕಳೆದುಕೊಂಡರು. ಶಾರುಖ್ ಖಾನ್ ಹಲವಾರು ಸಂದರ್ಶನಗಳಲ್ಲಿ ತಮ್ಮ ತಂದೆ ತಾಯಿಯ ಬಗ್ಗೆ ಮಾತನಾಡಿದ್ದಾರೆ. 

ಶಾರುಖ್ ಖಾನ್ ಸೋಷಯಲ್‌ ಮೀಡಿಯಾದಲ್ಲಿ ಸಾಕಷ್ಟು ಆಕ್ಟಿವ್‌ ಆಗಿರುತ್ತಾರೆ. ಹಲವು ಘಟನೆ ನಡೆದಾಗ ಟ್ವೀಟ್ ಮಾಡಿದ್ದೂ ಇದೆ. ಆದರೆ ಆಪರೇಷನ್ ಸಿಂದೂರ್ ಬಗ್ಗೆ ಶಾರುಖ್ ಖಾನ್ ಯಾವುದೇ ಟ್ವೀಟ್ ಮಾಡಿಲ್ಲ. ಇನ್‌ಸ್ಟಾಗ್ರಾಮ್‌ ಪೋಸ್ಟ್‌,ಸ್ಟೋರಿ ಹಾಕಿಲ್ಲ

ಈ ಹಿಂದೆ ಶಾರುಖ್ ಖಾನ್ ಪಹಲ್ಗಾಮ್ ದಾಳಿಯನ್ನು ಖಂಡಿಸಿದ್ದರು. ಭಾರತದ ಪ್ರತಿ ದಾಳಿಯನ್ನು ಬೆಂಬಲಿಸಿಯೇ ಇಲ್ಲ. ಶಾರುಖ್ ಖಾನ್ ಅವರು ಆಪರೇಷನ್‌ ಸಿಂದೂರ್‌ ಬಗ್ಗೆ ಮಾತನಾಡದಿರುವುದನ್ನು ಅವರ ಅಭಿಮಾನಿಗಳೇ ಪ್ರಶ್ನೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಶಾರುಖ್ ಖಾನ್ ಅವರ ಹಳೆಯ ವಿಡಿಯೋ ವೈರಲ್ ಆಗಿದೆ. 

"ಎರಡೂ ಕಡೆ ಪಾಯಿಂಟ್ ಇದೆ. ನನ್ನ ಕುಟುಂಬಕ್ಕೆ ಪಾಕಿಸ್ತಾನದ ಹಿನ್ನೆಲೆ ಇದೆ. ನನ್ನ ತಂದೆ ಪಾಕಿಸ್ತಾನದಲ್ಲಿ ಹುಟ್ಟಿದವರು. ನನ್ನ ತಂದೆಯ ಕುಟುಂಬ ಪಾಕಿಸ್ತಾನದಲ್ಲಿದೆ. ಅವರು ಒಳ್ಳೆಯ ನೆರೆಹೊರೆಯುವರು, ನಾವು ಒಳ್ಳೆಯ ನೆರೆಹೊರೆಯವರು ಈ ರೀತಿ ಭಾವಿಸೋಣ" ಎಂದು ಶಾರುಖ್ ಖಾನ್ ಅವರು ಹೇಳಿದ್ದರು. ಶಾರುಖ್‌ ಅವರ ಈ ಹಳೆಯ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ. 

ಶಾರುಖ್ ಖಾನ್ ಒಮ್ಮೆ ಅನುಪಮ್ ಖೇರ್ ಅವರ ಕಾರ್ಯಕ್ರಮಕ್ಕೆ ಹೋಗಿದ್ದರು. ಅನುಪಮ್ ಖೇರ್ ಅವರ ತಂದೆಯ ಬಗ್ಗೆ ಕೇಳಿದರು. ಶಾರುಖ್ ಖಾನ್‌ ಆಗ, ನಮ್ಮ ತಂದೆ ಮೊದಲು ವಕೀಲರಾಗಿದ್ದರು, ನಂತರ ಅವರು ಪ್ರಾಕ್ಟೀಸ್ ಮಾಡಲಿಲ್ಲ. ಅದಕ್ಕೆ ನಾನು ಸರಿಯಾದವನಲ್ಲ ಎಂದು ಭಾವಿಸಿದ್ದರು ಎಂದು ನಮ್ಮ ಬಳಿ ಹೇಳಿದ್ದರು. ಬಹುಶಃ ದೇಶದ ಅತ್ಯಂತ ಕಿರಿಯ ಸ್ವಾತಂತ್ರ್ಯ ಹೋರಾಟಗಾರ ನಮ್ಮ ತಂದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅವರ ಬಳಿ ತಾಮ್ರ ಫಲಕವಿದೆ. ಅವರು 14-15 ವರ್ಷ ವಯಸ್ಸಿನಲ್ಲಿ ಜೈಲಿಗೆ ಹೋದರು. ಅವರು ಮೌಲಾನಾ ಅಬ್ದುಲ್ ಕಲಾಂ ಆಜಾದ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು ಎಂದು ಶಾರುಖ್‌ ಖಾನ್‌ ಹೇಳುತ್ತಾರೆ.

Post a Comment

0Comments

Post a Comment (0)