ಇಸ್ಲಾಮಾಬಾದ್: ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದ ಸಂದರ್ಭ ಸಾವನ್ನಪ್ಪಿದ ಲಷ್ಕರ್-ಎ-ತೈಬಾ ಸಂಘಟನೆಯ ಉಗ್ರನೊಬ್ಬನ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಸೇನಾಧಿಕಾರಿಗಳು ಭಾಗಿಯಾದ ಫೋಟೋಗಳು ವೈರಲ್ ಆಗಿವೆ, ಇಂತಹ ಕ್ರಮಗಳಿಗೆ ಭಾರತ ಕೆಂಡ ಕಾರಿದ ಬೆನ್ನಲ್ಲೇ ಪಾಕ್ ಸೇನೆ ಆತ ಒಬ್ಬ ಮುಗ್ದ ವ್ಯಕ್ತಿ ಹಾಗೂ ಧರ್ಮ ಪ್ರಚಾರಕ ಎಂದು ಸಮರ್ಥನೆ ಮಾಡಿಕೊಂಡಿದೆ,
ಫೋಟೋ ವೈರಲ್ ಆದ ಬೆನ್ನಲ್ಲೇ ವಿವಾದ ಕಡಿಮೆ ಮಾಡುವ ಉದ್ದೇಶದಿಂದ ಪಾಕಿಸ್ತಾನದ ಮಿಲಿಟಿರಿ ವಕ್ತಾರ ಡಿಜಿಐಎಸ್‍ಪಿಆರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಆತ ಒಬ್ಬ ಸರಳ, ಮುಗ್ಧ ಕುಟುಂಬದ ವ್ಯಕ್ತಿ, ಪಕ್ಷದ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾರೆ, ಜೊತೆಗೆ ಅದನ್ನು ಸಾಬೀತುಪಡಿಸಲು ಪಾಕಿಸ್ತಾನ ರಾಷ್ಟ್ರೀಯ ಗುರುತಿನ ಚೀಟಿಯನ್ನು ಕೂಡ ಪ್ರದರ್ಶಿಸಿದ್ದಾರೆ,
ಭಾರತೀಯ ಅಧಿಕಾರಿಗಳು ಇದನ್ನು ಸಂಪೂರ್ಣ ಸುಳ್ಳು ಏಂದಿದ್ದಾರೆ, ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗೆ ಸರ್ಕಾರಿ ಅಂತ್ಯಕ್ರಿಯೆ ನೀಡುವುದು ಒಂದು ಪದ್ಧತಿಯಾಗಿರಬಹುದು, ಆದರೆ ಈ ಫೋಟೋ ಮೂಲಕ ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದೆ ಎಂಬುದು ಸಾಬೀತಾಗಿದೆ ಎಂದಿದ್ದಾರೆ,