ಬೆಂಗಳೂರು: ದಾಸಸಾಹಿತ್ಯದ ಪಿತಾಮಹ ಶ್ರೀ ಪುರಂದರದಾಸರ ಆರಾಧನೆಯನ್ನು ಸ್ಮರಿಸುವ ಗಾನ–ಜ್ಞಾನ ಯಜ್ಞವನ್ನು ದಾಸ ಸಾಹಿತ್ಯ ಪ್ರಚಾರ ಮಾಧ್ಯಮವಾಗಿರುವ ಶ್ರೀನಿವಾಸ ಉತ್ಸವ ಬಳಗವು ಬಸವನಗುಡಿಯ ಶ್ರೀಮದ್ ಉತ್ತರಾದಿ ಮಠದ ಆವರಣದಲ್ಲಿ ಆಯೋಜಿಸಲಾಗಿತ್ತು; ದಾಸರ ಕೃತಿಗಳ ಗೋಷ್ಠಿಗಾಯನ, ನಾಮಸಂಕರ‍್ತನೆ ಹಾಗೂ ಪ್ರಶಸ್ತಿ ಪ್ರದಾನಗಳೊಂದಿಗೆ ಈ ಉತ್ಸವವು ದಾಸಪರಂಪರೆಯ ಸತ್ವವನ್ನು ಅನಾವರಣಗೊಳಿಸಿತು.
ದಾಸರ ಬೃಹತ್ ಏಕಶಿಲಾ ವಿಗ್ರಹ ಪ್ರತಿಷ್ಠಾಪನೆಯ ಆರನೇ ರ‍್ಷದ ಸಂಭ್ರಮದ ಅಂಗವಾಗಿ, ನಡೆದ ಈ ಉತ್ಸವವನ್ನುಭುವನಗಿರಿ ಆಶ್ರಮದ ಪೂಜ್ಯ ಶ್ರೀ ಸುವಿದ್ಯೇಂದ್ರ ತರ‍್ಥ ಶ್ರೀಪಾದರು ಉದ್ಘಾಟಿಸಿ ಮಾತನಾಡುತ್ತ ಅಧ್ಯಾತ್ಮ, ಸಂಸ್ಕೃತಿ, ಸಾಹಿತ್ಯ ಮತ್ತು ಸಂಗೀತದ ಸುಗಂಧವನ್ನು ನಾಡಿನಾದ್ಯಂತ ಪಸರಿಸುವ ಮಹತ್ತರ ಧ್ಯೇಯದೊಂದಿಗೆ ಸಂಸ್ಥಾಪಕ ಅಧ್ಯಕ್ಷ ಡಾ. ಟಿ. ವಾದಿರಾಜ್ ನೇತೃತ್ವದ ಈ ಉತ್ಸವ ಬಳಗವು ದಾಸಶ್ರೇಷ್ಠ ಶ್ರೀ ಪುರಂದರದಾಸರ ಪುಣ್ಯದಿನದ ಸಂರ‍್ಭದಲ್ಲಿ ದಾಸ–ಮಾಧ್ವ ಸಾಹಿತ್ಯ, ಭಾಷಾಂತರ, ಸಂಶೋಧನೆ ಮತ್ತು ಸಾಂಸ್ಕೃತಿಕ ಸೇವೆಗಳಿಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಗೌರವಿಸಿ ಹಿರಿಯ ಹರಿದಾಸ ಸಾಹಿತ್ಯ ಸಂಶೋಧಕ ,ಚರಿತಜ್ಞ, ಬಹುಭಾಷಾ ಕೋವಿದ ವಿಜಯಪುರದ ಡಾ. ಕೃಷ್ಣ ಕೊಲ್ಹಾರ ಕುಲರ‍್ಣಿ ಅವರಿಗೆ ‘ಶ್ರೀ ಮಧ್ವ–ಪುರಂದರ ಪ್ರಶಸ್ತಿ’ ಪ್ರದಾನ ಮಾಡಿರುವುದು ಶ್ಲಾಘನೀಯ ತಿಳಿಸಿದರು. ಮುಖ್ಯ ಅತಿಥಿಗಳಾದ ಪಂ. ಗುತ್ತಲ್ ರಂಗಾಚಾರ್ (ಕುಲಪತಿ, ಜಯತರ‍್ಥ ವಿದ್ಯಾಪೀಠ),ಡಾ. ಸತ್ಯಧ್ಯಾನಾಚಾರ್ ಕಟ್ಟಿ (ಪ್ರಾಂಶುಪಾಲ),ಪಂ. ವಿದ್ಯಾಧೀಶಾಚರ‍್ಯ ಗುತ್ತಲ್ (ಕರ‍್ಯನರ‍್ವಹಣಾಧಿಕಾರಿ, ಉತ್ತರಾದಿ ಮಠ),ಡಾ. ಎಂ.ಆರ್.ವಿ. ಪ್ರಸಾದ್ (ಅಧ್ಯಕ್ಷ, ಗಾಯನ ಸಮಾಜ),ಹಿರಿಯ ಹಿಂದೂಸ್ತಾನಿ ಗಾಯಕ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ. ಮುದ್ದುಮೋಹನ್ ಉಪಸ್ಥಿತಿಯಲ್ಲಿ ಸಾಧಕೋತ್ತಮರಾದ ಡಾ. ಸ್ವಾಮಿರಾವ್ ಕುಲರ‍್ಣಿ (ದಾಸ ಸಾಹಿತ್ಯ ಸಂಶೋಧಕ),ಡಾ. ರವೀಂದ್ರ ಕುಷ್ಟಗಿ (ಅಧ್ಯಾತ್ಮ ಚಿಂತಕ),ಹಿರಿಯ ಪತ್ರರ‍್ತ ರಾಘವೇಂದ್ರ ಗಣಪತಿ ಇವರಿಗೆ ‘ಹರಿದಾಸಾನುಗ್ರಹ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಗದ ಪೋಷಕರಾದ ಕೆ. ಆರ್.ಗುರುರಾಜ ರಾವ್ ; ಬಿ.ಆರ್ ವಿ ಪ್ರಸಾದ್ ಹಾಗೂ ಮಾಧ್ಯಮ ಸಮಾಲೋಚಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ವೇದಿಕೆಯಲ್ಲಿದ್ದರು.ವಿದುಷಿ ಶುಭಾ ಸಂತೋಷ್ ಅವರ ನೇತೃತ್ವದಲ್ಲಿ ಶುಭ ಸಂತೋಷ್ ಅಕಾಡೆಮಿಯ ಶಿಷ್ಯರಿಂದ ಗೋಷ್ಠಿಗಾಯನ ನಡೆಯಿತು.