ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಉಚಿತ ಭಾರೀ ವಾಹನ ಚಾಲನಾ ತರಬೇತಿ

varthajala
0

 ಬೆಂಗಳೂರು : ಕರ್ನಾಟಕ ಸರ್ಕಾರದ ಸಮಾಜಕಲ್ಯಾಣ ಇಲಾಖೆಯ PM-AJAY ಯೋಜನೆಯಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಾಲೂರು, ಮಳವಳ್ಳಿ, ಹಾಸನ, ಚಿಕ್ಕಮಗಳೂರು ಹಾಗೂ ಹೊಳಲ್ಕೆರೆ ತರಬೇತಿ ಕೇಂದ್ರಗಳಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಉಚಿತ ಭಾರೀ ವಾಹನ ಚಾಲನಾ ತರಬೇತಿ ಆಯೋಜಿಸಲಾಗಿದೆ. 


ಭಾರೀ ವಾಹನ ತರಬೇತಿ, ಉಚಿತ ವಸತಿಮತ್ತು ಊಟ, ಒಂದು ತಿಂಗಳ ತರಬೇತಿ ಸಾರಿಗೆ ಇಲಾಖೆಯ (ಆರ್‍ಟಿಒ) ಸಹಯೋಗದೊಂದಿಗೆ ಉಚಿತ ಪರವಾನಗಿ ನೀಡಲಾಗುತ್ತದೆ.ಅರ್ಹ ಅಭ್ಯರ್ಥಿಗಳು ತಮ್ಮ ಹತ್ತಿರದ ತರಬೇತಿ ಕೇಂದ್ರದಲ್ಲಿ ನೇರವಾಗಿ ಅಥವಾ www.ksrtcjobs.karnataka.gov.in  ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದ್ದು, ವಿವರ ಭರ್ತಿ ಮಾಡಿದ್ದಲ್ಲಿ, ಈ ಕಛೇರಿಯಿಂದಲೇ ತಮ್ಮನ್ನು ಸಂಪರ್ಕಿಸಲಾಗುವುದು.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ  ಮಳವಳ್ಳಿ- 7760990137, ಹಾಸನ- 7760990533 ಹೊಳಲ್ಕೆರೆ- 7019072560, ಮಾಲೂರು- 7760994432  ಹಾಗೂ ಚಿಕ್ಕಮಗಳೂರು- 9606037746 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕರು (ಸಿಬ್ಬಂದಿ & ಜಾಗೃತ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)