ಬಿ.ಎಲ್. ಸಂತೋಷ್ ಜಿ ರವರಿಂದ ಚಾಲನೆ 25ಸಾವಿರ ಹಿಂದೂ ಕಾರ್ಯಕರ್ತರ ಸಮಾಗಮದಲ್ಲಿ ಹಿಂದೂ ಸಮಾಜೋತ್ಸವ ವತಿಯಿಂದ ಬೃಹತ್ ಶೋಭಯಾತ್ರೆ ಫೆಬ್ರವರಿ 7ರಂದು ಗೋವಿಂದರಾಜನಗರ

varthajala
0
ಬೆಂಗಳೂರು: ಆರ್ ಎಸ್ ಎಸ್ ಸಂಘದ 100ನೇ ವರ್ಷದ ಪ್ರಯುಕ್ತ ಗೋವಿಂದರಾಜನಗರ ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ವತಿಯಿಂದ ಫೆಬ್ರವರಿ 7 ರಂದು ಸಂಜೆ 4 ಗಂಟೆಗೆ ಬಿಜಿಎಸ್ ಆಟದ ಮೈದಾನದಲ್ಲಿ ಬೃಹತ್ ಹಿಂದೂ ಸಮಾಜೋತ್ಸವವನ್ನು ಆಯೋಜಿಸಲಾಗಿದೆ. ಇದೇ ದಿನ ಸಂಜೆ 4 ಗಂಟೆಗೆ ಪ್ರಶಾಂತನಗರ ವೃತ್ತದಿಂದ ಬಿಜಿಎಸ್ ಆಟದ ಮೈದಾನದವರೆಗೆ ಭವ್ಯ ಶೋಭಾಯಾತ್ರೆ ನಡೆಯಲಿದೆ ಎಂದು ಶ್ರೀ ಭರತಾರಣಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮತಾಜಿ ವಿವೇಕಮಯೀ ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಮಾತಾ ವಿವೇಕಮಯೀರವರು ಮಾತನಾಡಿದ ಅವರು, “ಇದು ಬೆಂಗಳೂರು ನಗರದಲ್ಲಿ ನಡೆಯಲಿರುವ ಭವ್ಯ ಮತ್ತು ಐತಿಹಾಸಿಕ ಶೋಭಾಯಾತ್ರೆಯಾಗಿದ್ದು, 25 ಸಾವಿರಾರು ಹಿಂದೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಬಾಲ ಶ್ರೀರಾಮ ವೇಷಧಾರಿಗಳು, ಅಯೋಧ್ಯೆಯ ಶ್ರೀರಾಮ ಮಂದಿರದ ಮಾದರಿ, ಬಾಲರಾಮ ಮತ್ತು ಹನುಮಂತ ದೇವರ ಪ್ರತಿಕೃತಿಗಳು, ಹಿಂದೂ ಧರ್ಮದ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರಗಳು ಶೋಭಾಯಾತ್ರೆಯ ವಿಶೇಷ ಆಕರ್ಷಣೆಯಾಗಿವೆ” ಎಂದು ಹೇಳಿದರು. ಇದೇ ವೇಳೆ ವಿಶೇಷವಾಗಿ ಮಲ್ಲ ಕಬ್ಬ ಪ್ರದರ್ಶನ, ಚಂಡೆ, ನಾಸಿಕ್ ಬ್ಯಾಂಡ್, ಭಜನಾ ತಂಡಗಳು, ಗೊಂಬೆಕುಣಿತ ಹಾಗೂ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಭಾರತ ಮಾತೆಯ ಭಾವಚಿತ್ರದೊಂದಿಗೆ ಸಾವಿರಾರು ಜನರು ಏಕತೆಯ ಸಂದೇಶ ಸಾರುತ್ತಾ ಶೋಭಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮವು ಅದಿಚುಂಚನಗಿರಿ ಶಾಖಾ ಮಠದ ಶ್ರೀ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಶ್ರೀ ಭವತಾರಿಣಿ ಆಶ್ರಮದ ಪೂಜ್ಯ ಮಾತಾಜಿ ವಿವೇಕಮಯೀಜಿ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಬಿ.ಎಲ್. ಸಂತೋಷ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಸಭಾ ಕಾರ್ಯಕ್ರಮದಲ್ಲಿ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, 1000 ಮಕ್ಕಳಿಂದ ಸಾಮೂಹಿಕ ವಂದೇ ಮಾತರಂ ಮತ್ತು ಮಲ್ಲಕಂಭ , ಗೀತೆ ಗಾಯನ ಕಾರ್ಯಕ್ರಮಗಳು ನಡೆಯಲಿವೆ.ಎಲ್ಲ ಕಡೆಗಳಲ್ಲಿ ವಿದ್ಯುತ್ ದೀಪಾಲಂಕಾರ, ಭಗ್ವತ್ ಧ್ವಜ ಹಾರಾಡಲಿದೆ ಮತ್ತು ಬಿಜೆಪಿ ಮುಖಂಡರು, ಚಿಂತಕರು, ಸಾಹಿತಿಗಳು ಹಾಗೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
“ಇದು ಸಮಸ್ತ ಹಿಂದೂ ಸಮಾಜದ ಏಕತೆಯ ಸಂಕೇತವಾಗಿರುವ ಮಹೋತ್ಸವವಾಗಿದ್ದು, ಎಲ್ಲರೂ ಕುಟುಂಬ ಸಮೇತವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಮನವಿ ಮಾಡಿದರು.

Post a Comment

0Comments

Post a Comment (0)