ತ್ಯಾಜ್ಯ ನೀರು ಮರುಬಳಕೆ ಕುರಿತ ಸಂಶೋಧನೆಗೆ ಜಲಮಂಡಳಿ ಮುಖ್ಯ ಅಭಿಯಂತರರಾದ ರಾಜೀವ್ ಕೆ.ಎನ್. ಅವರಿಗೆ ‘ಪಿಎಚ್‌ಡಿ’ (ಡಾಕ್ಟರೇಟ್) ಗರಿ

varthajala
0

 ಬೆಂಗಳೂರುಫೆಬ್ರವರಿ 05: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB) ಮುಖ್ಯ ಅಭಿಯಂತರರಾದ ಶ್ರೀ ರಾಜೀವ್ ಕೆ.ಎನ್. ಅವರಿಗೆಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿನ ಅವರ ಮಹತ್ವದ ಸಂಶೋಧನೆಗಾಗಿ ಪ್ರತಿಷ್ಠಿತ ರೇವಾ ವಿಶ್ವವಿದ್ಯಾಲಯವು ಡಾಕ್ಟರೇಟ್ (Ph.D) ಪದವಿಯನ್ನು ನೀಡಿ ಗೌರವಿಸಿದೆ.ಶ್ರೀ ಕೆ ಎನ್‌ ರಾಜೀವ್ ಅವರು ಮಂಡಿಸಿದ "ಕಾಂಕ್ರೀಟ್ ತಯಾರಿಕೆಯಲ್ಲಿ ದ್ವಿತೀಯ ಹಂತದ ಸಂಸ್ಕರಿಸಿದ ತ್ಯಾಜ್ಯ ನೀರಿನ ಸುಸ್ಥಿರ ಮರುಬಳಕೆ" (SUSTAINABLE REUSE OF SECONDARY TREATED WASTEWATER FOR CONCRETE MANUFACTURING) ಎಂಬ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಈ ಡಾಕ್ಟರೇಟ್ ಪದವಿ ಲಭಿಸಿದೆ.

ಈ ಸಂಶೋಧನೆಯ ವಿಶೇಷವೆಂದರೆಕಾಂಕ್ರೀಟ್ ತಯಾರಿಕೆಯಲ್ಲಿ ಸಂಸ್ಕರಿಸಿದ ನೀರನ್ನು ಬಳಸಿದಾಗ ಅದರ ಬಲ ಮತ್ತು ಗುಣಮಟ್ಟ ಹೇಗಿರುತ್ತದೆ ಎಂಬ ಪ್ರಯೋಗಾರ್ಥ ಪರೀಕ್ಷೆಗಳನ್ನು ವಿಶ್ವವಿಖ್ಯಾತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ನಡೆಸಲಾಗಿದೆ. ಅಲ್ಲದೆಇವರ ಸಂಶೋಧನಾ ಪ್ರಬಂಧಗಳು ಜಾಗತಿಕ ಮಟ್ಟದ ಅತ್ಯುನ್ನತ ಶ್ರೇಣಿಯಾದ ಕ್ಯೂ-1 ಮತ್ತು ಕ್ಯೂ-2 (Q1 and Q2 Level) ನ 5 ಪ್ರತಿಷ್ಠಿತ ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟಗೊಂಡಿದ್ದುಈ ಅಧ್ಯಯನದ ವೈಜ್ಞಾನಿಕ ನಿಖರತೆಗೆ ಸಾಕ್ಷಿಯಾಗಿದೆ. ಬೆಂಗಳೂರಿನಲ್ಲಿ ಕಾವೇರಿ ನೀರನ್ನು ಕೇವಲ ಕುಡಿಯಲು ಮಾತ್ರ ಬಳಸಿಕಟ್ಟಡ ನಿರ್ಮಾಣ ಮತ್ತು ಇತರೆ ಉದ್ದೇಶಗಳಿಗೆ ಸಂಸ್ಕರಿಸಿದ ನೀರನ್ನು ಬಳಸುವಂತೆ ಜಲಮಂಡಳಿ ಬೃಹತ್ ಆಂದೋಲನವನ್ನೇ ನಡೆಸುತ್ತಿದೆ. ಈ ಸಂದರ್ಭದಲ್ಲಿಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಇದೇ ವಿಷಯದಲ್ಲಿ ಆಳವಾದ ಸಂಶೋಧನೆ ನಡೆಸಿಕಾಂಕ್ರೀಟ್ ತಯಾರಿಕೆಗೆ ಸಂಸ್ಕರಿಸಿದ ನೀರು ಹೇಗೆ ಅತ್ಯುತ್ತಮ ಮತ್ತು ಸುಸ್ಥಿರ ಎಂಬುದನ್ನು ಐಐಎಸ್‌ಸಿ ಪ್ರಯೋಗಗಳ ಮೂಲಕ ವೈಜ್ಞಾನಿಕವಾಗಿ ಸಾಬೀತುಪಡಿಸಿರುವುದು ಮಂಡಳಿಯ ಪ್ರಯತ್ನಗಳಿಗೆ ಸಿಕ್ಕ ದೊಡ್ಡ ಗೆಲುವಾಗಿದೆ.


Post a Comment

0Comments

Post a Comment (0)