ಬೆಂಗಳೂರು : ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಸಂಸ್ಥೆಯಲ್ಲಿ ಮೂರು ದಿನದ ಅಣಬೆ ಉತ್ಪಾದನಾ ತಾಂತ್ರಿಕತೆಗಳು ಕುರಿತಾದ ತರಬೇತಿ ಕಾರ್ಯಕ್ರಮವನ್ನು 2026 ನೇ ಮಾರ್ಚ್ 03, 04 ಮತ್ತು 5 ರಂದು ಹಮ್ಮಿಕೊಳ್ಳಲಾಗಿದೆ.ಆಸಕ್ತರು ನೋಂದಣಿಗಾಗಿ ಡಾ. ರುದ್ರೇಶ ಡಿ. ಎಲ್. ದೂರವಾಣಿ ಸಂಖ್ಯೆ 9538243305 ಹಾಗೂ ಕು. ಹೇಮಾ ಹಾದಿಮನಿ ದೂರವಾಣಿ ಸಂಖ್ಯೆ 9019708340 ಇವರನ್ನು ಸಂಪರ್ಕಿಸಬಹುದು.
ಮೂರು ದಿನಗಳ ಚಿಪ್ಪು ಅಣಬೆ, ಹಾಲ ಅಣಬೆ ಮತ್ತು ಬಿಳಿ ಗುಂಡಿ ಅಣಬೆ ಬೇಸಾಯ ತರಬೇತಿ ನೀಡಲಿದ್ದು, ತರಬೇತಿ ಶುಲ್ಕ ರೂ. 3000 ರೂಪಾಯಿ ನಿಗದಿಪಡಿಸಲಾಗಿದೆ. ಊಟ ವಸತಿ ಸೌಲಭ್ಯವಿರುತ್ತದೆ ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.