ಅಗಲಿದ ಪತ್ರಕರ್ತರಿಗೆ ಕೆಯುಡಬ್ಲೂಜೆಯಲ್ಲಿ ಶ್ರದ್ಧಾಂಜಲಿ ಸಭೆ ಇಂದು

varthajala
0

 ಬೆಂಗಳೂರು:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂೃಜೆ) ವತಿಯಿಂದ ಇತ್ತೀಚೆಗೆ ನಮ್ಮನ್ನು ಅಗಲಿರುವ ಸುದ್ದಿಮನೆಯ ಹಿರಿಯ ಪತ್ರಕರ್ತರುಗಳಿಗೆ ಪೆ.6 ರಂದು ಬೆಳಿಗ್ಗೆ 11.30 ಕ್ಕೆ ಕೆಯುಡಬ್ಲೂಜೆ ಸಭಾಂಗಣ, 3ನೇ ಮಹಡಿ, ಕೆ.ಜಿ.ರಸ್ತೆ, ಬೆಂಗಳೂರು -09. ಇಲ್ಲಿ ಶ್ರದ್ದಾಂಜಲಿ ಸಭೆಯನ್ನು ಏರ್ಪಡಿಸಲಾಗಿದೆ. 


ಹಿರಿಯ ಪತ್ರಕರ್ತರುಗಳಾದ ಕೋಲಾರದ ಹೊನ್ನುಡಿ ಎಂ.ಜಿ.ಪ್ರಭಾಕರ, ಬೀದರ ನಾಗಶೆಟ್ಟಿ ಧರಂಪುರ, ಬೆಂಗಳೂರು ಸಂಜೆವಾಣಿ ದೊಡ್ಡಬೊಮ್ಮಯ್ಯ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ಭೀಮಸೇನ ಪದಕಿ, ಬೆಳಗಾವಿ ಎಂ.ಎನ್.ಪಾಟೀಲ, ಸಕಲೇಶಪುರದ ಶಿವಕುಮಾರ್, ಕಲಬುರ್ಗಿ ವಿಜಯಕರ್ನಾಟಕ ಪ್ರಭುಲಿಂಗ ನೀಲೂರೆ, ಮೈಸೂರಿನ ಸೂರಜ್, ರಾಯಚೂರಿನ ನಹೀಮ್ ಅಶ್ರ್ ಪ ಅವರುಗಳಿಗೆ ಸಂತಾಪ ಸೂಚಕ ಸಭೆಯಲ್ಲಿ ನುಡಿನಮನ ಸಲ್ಲಿಸಲಾಗುವುದು.

ಸಭೆಯಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್. ಪ್ರೆಸ್ ಕ್ಲಬ್ ಆಪ ಬೆಂಗಳೂರು ಅಧ್ಯಕ್ಷ ಆರ್.ಶ್ರೀಧರ್, ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾದ ರಮೇಶ್ ಪಾಳ್ಯ ಭಾಗವಹಿಸುವರು. ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ವಹಿಸುವರು ಎಂದು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ತಿಳಿಸಿದ್ದಾರೆ.

Post a Comment

0Comments

Post a Comment (0)